ಅಂತರಾಷ್ಟ್ರೀಯ

ಅಮೆರಿಕದಲ್ಲಿ ಈ ಬಾರಿ ಪ್ರಧಾನಿ ಮೋದಿ ಜತೆ ಸೆಲ್ಫಿ ಇಲ್ಲ! ಏಕೆ ಗೊತ್ತಾ?

Pinterest LinkedIn Tumblr

modi-selfeeವಾಷಿಂಗ್ಟನ್: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ರಾಜಧಾನಿ ವಾಷಿಂಗ್ಟನ್ ನಲ್ಲಿ ಸುಮಾರು ನಾಲ್ಕು ಗಂಟೆಗಳ ಅತ್ಯದ್ಭುತ ಸಮಯ ಕಳೆದರು. ಈ ವೇಳೆ ಅವರೊಂದಿಗೆ ಯಾರೊಬ್ಬರೊಂದಿಗೂ ಸೆಲ್ಫಿ ತೆಗೆದುಕೊಳ್ಳಲಿಲ್ಲ!
ಅಮೆರಿಕನ್ನರ ಈ ನಡೆ ಸ್ವತಃ ಸೆಲ್ಫಿಯ ಬಗ್ಗೆ ಉತ್ಸಾಹಶಾಲಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಚ್ಚರಿ ಮೂಡಿಸಿತು.
ಕಾರಣ ಏನು ಗೊತ್ತಾ… ಮೋದಿ ವಾಷಿಂಗ್ಟನ್ ಭೇಟಿಯ ವೇಳೆ ನೀವು ಅವರನ್ನು ಭೇಟಿ ಮಾಡಬಹುದು. ಆದರೆ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳುವಂತಿಲ್ಲ ಎಂದು ಅಮೆರಿಕ ಸಂಸದರಿಗೆ ಹಾಗೂ ಸಿಬ್ಬಂದಿಗೆ ಸೂಚಿಸಲಾಗಿತ್ತು.
‘ಮೊದಲು ಮತ್ತು ಮೊಟ್ಟಮೊದಲು – ನೋ ಸೆಲ್ಫಿ!! ದೇಶಕ್ಕೆ ಭೇಟಿ ನೀಡುವ ಇತರೆ ದೇಶಗಳ ಮುಖ್ಯಸ್ಥರೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದು ಸೂಕ್ತವಲ್ಲ ಮತ್ತು ಅಪ್ರಸ್ತೂತ’ ಎಂದು ಶಿಷ್ಟಾಚಾರ ತಜ್ಞೆ ಹಾಗೂ ಸದನ ವಿದೇಶಾಂಗ ವ್ಯವಹಾರಗಳ ಸಮಿತಿ ಸದಸ್ಯೆ ಎಲಿಜಬೆತ್ ಹೆಂಗ್ ಅವರು ಆದೇಶ ಹೊರಡಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಬಾರಿ ಅಮೆರಿಕದ ನಾಯಕರಾರೂ ಮೋದಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದನ್ನು ಬಿಟ್ಟು, ಅವರ ಆಟೋಗ್ರಾಫ್ ಗಾಗಿ ಮುಗಿಬಿದ್ದಿದ್ದರು.
ಪ್ರಧಾನಿ ಮೋದಿ ಅವರು ಈ ಬಾರಿ ಅಮೆರಿಕದ ಜಂಟಿ ಅಧಿವೇಶನವನ್ನು ಉದ್ದೇಶಿ ಮಾತನಾಡಿದ್ದಲ್ಲದೆ, ವಾಷಿಂಗ್ಟನ್ ನಲ್ಲಿ ಇತರೆ ನಾಲ್ಕು ಸಭೆಗಳಲ್ಲಿ ಭಾಗವಹಿಸಿದರು.

Comments are closed.