ಅಂತರಾಷ್ಟ್ರೀಯ

ಬಾಹ್ಯ ಬೆದರಿಕೆಗಳಿಗೆ ಹೆದರುವುದಿಲ್ಲ; ಅಮೆರಿಕಗೆ ಚೀನಾ ತಿರುಗೇಟು

Pinterest LinkedIn Tumblr

Sun-Jianguoಸಿಂಗಾಪುರ: ದಕ್ಷಿಣ ಚೀನಾ ಸಮುದ್ರದಲ್ಲಿ ಪ್ರಾಬಲ್ಯ ಮೆರೆಯಲು ಹವಣಿಸುತ್ತಿರುವ ಚೀನಾ ಅಮೆರಿಕಕ್ಕೆ ತಿರುಗೇಟು ನೀಡಿದ್ದು, ಬಾಹ್ಯ ಬೆದರಿಕೆಗಳಿಗೆ ತಾನು ಹೆದರುವುದಿಲ್ಲ ಎಂದು ಹೇಳಿದೆ.
ಸಿಂಗಾಪುರದಲ್ಲಿ ನಡೆಯುತ್ತಿರುವ ಭದ್ರತಾ ಶೃಂಗಸಭೆಯಲ್ಲಿ ಚೀನಾ ದೇಶದ ಪ್ರತಿನಿಧಿಯಾಗಿ ಪಾಲ್ಗೊಂಡಿರುವ ಅಡ್ಮಿರಲ್ ಸನ್ ಜಿಯಾಂಗುವೊ ಅವರು ಭಾನುವಾರ ಮಾತನಾಡಿ, ದಕ್ಷಿಣ ಚೀನಾ ಸಮುದ್ರದಲ್ಲಿನ ನೆರೆ ಹೊರೆಯವರ ಜೊತೆಗಿನ ಭೂಪ್ರದೇಶ ವಿವಾದಗಳಿಗೆ ಸಂಬಂಧಿಸಿದ ‘ಕಿರುಕುಳಗಳ’ ಬಗ್ಗೆ ತನಗೆ ಯಾವ ಹೆದರಿಕೆಯೂ ಇಲ್ಲ ಎಂದು ಹೇಳಿದ್ದಾರೆ. “ಹೊರಗಿರುವ ರಾಷ್ಟ್ರಗಳು ಈ ವಿಚಾರಕ್ಕೆ ಸಂಬಂಧಿಸಿದಂತೆ ರಚನಾತ್ಮಕ ಪಾತ್ರ ವಹಿಸಬೇಕೇ ಹೊರತು ಅದರ ವಿರುದ್ಧದ ಪಾತ್ರವನ್ನಲ್ಲ. ಕೆಲವು ರಾಷ್ಟ್ರಗಳು ತಮ್ಮ ಸ್ವಾರ್ಥಕ್ಕಾಗಿ ಪ್ರಚೋದನೆಗಳನ್ನು ಮಾಡುತ್ತಿರುವ ಕಾರಣ ದಕ್ಷಿಣ ಚೀನಾ ಸಮುದ್ರ ವಿಷಯ ಜಾಗತಿಕ ಮಟ್ಟದಲ್ಲಿ ಅತಿಯಾಗಿ ಚರ್ಚಿತವಾಗುತ್ತಿದೆ ಎಂದು ಹೇಳಿದರು.
ಇದೇ ವೇಳೆ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಅಶ್ಟೋನ್ ಕಾರ್ಟರ್ ಅವರ ಹೇಳಿಕೆಯನ್ನು ಹಿನ್ನಲೆಯಾಗಿಟ್ಟುಕೊಂಡು ಮಾತನಾಡಿದ ಸನ್, “ನಾವು ಯಾರಿಗೂ ತೊಂದರೆ ಉಂಟು ಮಾಡುವುದಿಲ್ಲ, ಆದರೆ ನಮಗೆ ನೀಡುವ ಯಾವುದೇ ತೊಂದರೆಗಳ ಬಗ್ಗೆ ನಮಗೆ ಭಯವೂ ಇಲ್ಲ’ ಎಂದು ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
ಫಿಲಿಪ್ಪೈನ್ಸ್ ದೇಶ ತನ್ನದೆಂದು ಪ್ರತಿಪಾದಿಸುತ್ತಿರುವ ದಕ್ಷಿಣ ಚೀನಾ ದ್ವೀಪದಲ್ಲಿ ಚೀನೀ ನಿರ್ಮಾಣಗಳ ವಿರುದ್ಧ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಅಶ್ಟೋನ್ ಕಾರ್ಟರ್ ಅವರು ಈ ಹಿಂದೆ ಕಟುವಾದಿ ಮಾತನಾಡಿದ್ದರು. ಚೀನೀ ನಿರ್ಮಾಣಗಳ ಪರಿಣಾಮವಾಗಿ ಅಮೆರಿಕ ಮತ್ತು ಇತರ ರಾಷ್ಟ್ರಗಳು ಕ್ರಮ ಕೈಗೊಳ್ಳಬೇಕಾಗಬಹುದು ಎಂದು ಕಾರ್ಟರ್ ಹೇಳಿದ್ದರು. ಈ ಹಿನ್ನಲೆಯಲ್ಲಿ ಚೀನೀ ಅಡ್ಮಿರಲ್ ಸನ್ ಅಮೆರಿಕವನ್ನು ಕಟುವಾಗಿ ಟೀಕಿಸಿದರು.

Comments are closed.