ರಾಷ್ಟ್ರೀಯ

ಸೇನೆ ಕಣ್ತಪ್ಪಿಸಲು ಉಗ್ರರಿಂದ ‘ಕ್ಯಾಲ್ಕುಲೇಟರ್’ ಆ್ಯಪ್ ಬಳಕೆ

Pinterest LinkedIn Tumblr

kashmir_borderನವದೆಹಲಿ (ಪಿಟಿಐ): ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಭಾರತಕ್ಕೆ ಒಳ ನುಸುಳುವ ಉಗ್ರರು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಅವರ ಸಂಗಡಿಗರೊಂದಿಗೆ ಸಂಪರ್ಕ ಸಾಧಿಸಲು ‘ಕ್ಯಾಲ್ಕುಲೇಟರ್’ ಎಂಬ ಹೊಸ ಆ್ಯಪ್ ಅನ್ನು ಬಳಸುತ್ತಿದ್ದಾರೆ.

ಈಗಾಗಲೇ ಪಾಕ್ ಆಕ್ರಮಿತ ಕಾಶ್ಮೀರದಿಂದ ಭಾರತಕ್ಕೆ ನುಸುಳುವ ಉಗ್ರರ ಸಂಖ್ಯೆ ಏರಿಕೆಯಾಗುತ್ತಿದೆ. ಹೀಗೆ ಒಳನುಸುಳುವ ಉಗ್ರರು ಸ್ಮಾರ್ಟ್ ಫೋನ್ ಗಳನ್ನು ಬಳಸುತ್ತಿದ್ದು, ಅದರಲ್ಲಿ ಯಾವುದೇ ಸಂದೇಶಗಳನ್ನು ಸಂಗ್ರಹಿಸಿಟ್ಟಿರುವುದಿಲ್ಲ ಎಂದು ಭಾರತೀಯ ಸೇನೆ ಹೇಳಿದೆ.

ಉಗ್ರರು ಯಾವ ರೀತಿಯ ವಯರ್ ಲೆಸ್ ಮತ್ತು ಮೊಬೈಲ್ ಫೋನ್ ಗಳನ್ನು ಬಳಸುತ್ತಿದ್ದಾರೆ ಎಂಬುದರ ಮೇಲೆ ಸೇನೆಯ ಸಿಗ್ನಲ್ ಯುನಿಟ್ ಸದಾ ನಿಗಾ ಇರಿಸುತ್ತಿದೆ. ಅದೇ ವೇಳೆ ರಾಷ್ಟ್ರಿಯ ತಂತ್ರಜ್ಞಾನ ಅಧ್ಯಯನ ಸಂಸ್ಥೆ ಮತ್ತು ಇತರ ಸಂಸ್ಥೆಗಳು ಉಗ್ರರು ಬಳಸುತ್ತಿರುವ ತಂತ್ರಜ್ಞಾನದ ಬಗ್ಗೆ ಕಣ್ಗಾವಲಿರಿಸಿವೆ.

ಇದೀಗ ಉಗ್ರರು ಬಳಸುತ್ತಿರುವ ತಂತ್ರಜ್ಞಾನವನ್ನು ಮೊದಲ ಬಾರಿಗೆ ಅಮೆರಿಕ ಮೂಲದ ಕಂಪನಿಯೊಂದು ‘ಕತ್ರೀನಾ’ ಚಂಡಮಾರುತ ಲಗ್ಗೆಯಿಟ್ಟಾಗ, ನೆರೆ ಪೀಡಿತ ಪ್ರದೇಶದ ಜನರೊಂದಿಗೆ ಸಂಪರ್ಕ ಸಾಧಿಸುವುದಕ್ಕಾಗಿ ಬಳಸಿತ್ತು.

ಉಗ್ರ ಸಂಘಟನೆಗಳು ಈ ತಂತ್ರಜ್ಞಾನವನ್ನೇ ಅಭಿವೃದ್ಧಿ ಪಡಿಸಿ ‘ಕ್ಯಾಲ್ಕುಲೇಟರ್’ ಎಂಬ ಆ್ಯಪ್ ನ್ನು ತಯಾರಿಸಿದ್ದಾರೆ.

ಈ ಆ್ಯಪ್ ‘ಆಡ್ ಹಾಕ್ ನೆಟ್ವರ್ಕಿಂಗ್ ಪ್ರೊಟೋಕಾಲ್’ ಮೂಲಕ ಸಂಪರ್ಕ ಸಾಧಿಸುತ್ತಿದ್ದು, ವೈಫೈ ಅಥವಾ ‘ಸೆಲ್ಯುಲಾರ್ ನೆಟ್ ವರ್ಕ್’ನ ಸಹಾಯವಿಲ್ಲದೆಯೇ ಬಳಕೆದಾರರು ಸಂದೇಶಗಳನ್ನು, ಜಿಪಿಎಸ್ ಲೊಕೇಷನ್ ಗಳನ್ನು ಇನ್ನೊಬ್ಬರಿಗೆ ಕಳುಹಿಸಲು ಸಾಧ್ಯವಾಗುತ್ತದೆ.
ಈ ಆ್ಯಪ್ ನ್ನು ಸ್ಮಾರ್ಟ್ ಫೋನ್ ನಲ್ಲಿ ಡೌನ್ ಲೋಡ್ ಮಾಡಲು ಸಾಧ್ಯವಾಗಿದ್ದು, ಉಗ್ರರ ಸ್ಮಾರ್ಟ್ ಫೋನ್ ಗಳು ಆಫ್ ಏರ್ ನೆಟ್ ವರ್ಕ್ ಮೂಲಕ ಸಂಪರ್ಕ ಹೊಂದಿವೆ.

ಲಷ್ಕರ್ ಎ ತಯಬಾದ ಉಗ್ರರರನ್ನು ವಿಚಾರಣೆಗೊಳಪಡಿಸಿದಾಗ ಈ ಎಲ್ಲ ಮಾಹಿತಿಗಳು ಬಹಿರಂಗವಾಗಿದೆ ಎಂದು ಸೇನೆ ಹೇಳಿದೆ.

Comments are closed.