ಅಂತರಾಷ್ಟ್ರೀಯ

ಮೊಗದಿಶು: ಹೊಟೇಲ್‌ ಮೇಲೆ ಉಗ್ರರ ದಾಳಿ 10 ಸಾವು

Pinterest LinkedIn Tumblr

mogaಮಾಂಗೊದಿಶು(ಎಎಫ್‌ಪಿ): ಸೋಮಾಲಿಯಾದ ರಾಜಧಾನಿ ಮೊಗದಿಶುವಿನ ಹೊಟೇಲ್‌ ಮೇಲೆ ದಾಳಿ ನಡೆಸಿರುವ ಉಗ್ರರು, ಕಾರ್‌ಬಾಂಬ್‌ ಸ್ಫೋಟಿಸಿ, ಗುಂಡಿನ ಮಳೆಗರೆದಿದ್ದಾರೆ. ದುರ್ಘಟನೆಯಲ್ಲಿ 10 ಜನ ಸಾವಿಗೀಡಾಗಿದ್ದಾರೆ.

ಮಂಗಳವಾರ ಸ್ಥಳೀಯ ಕಾಲಮಾನ ಸಂಜೆ 5.40ಕ್ಕೆ ಉಗ್ರರು ಬಾಂಬ್‌ ಸ್ಫೋಟಿಸಿದ್ದು, ದಾಳಿಯಲ್ಲಿ 40ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಭದ್ರತಾಪಡೆ ಉಗ್ರರ ಜತೆ ಐದು ಗಂಟೆಗಳ ಗುಂಡಿನ ಕಾಳಗ ನಡೆಸಿದ್ದಾರೆ. ಅಲ್‌ ಖೈದಾ ಜತೆ ಸಂಪರ್ಕ ಹೊಂದಿರುವ ಶಬಾಬ ಗುಂಪು ದಾಳಿಯ ಹೊಣೆ ಹೊತ್ತಿದೆ.

ಹೊಟೇಲ್ ಕಟ್ಟಡ ಸಂಕೀರ್ಣದಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದ ಬಳಿಕ ‘ವೆಹಿಕಲ್–ಬರ್ನ್‌ ಇಂಪ್ರುವೈಸ್‌ ಎಕ್ಸ್‌ಪ್ಲೋಸಿವ್‌ ಡಿವೈಸ್’(ವಿಬಿಐಇಡಿ) ಸ್ಫೋಟಿಸಿದ್ದಾರೆ ಎಂದು ಭದ್ರತಾಪಡೆ ಮೂಲಗಳು ತಿಳಿಸಿವೆ.

‘ಸ್ಫೋಟದಲ್ಲಿ ಇಡೀ ಪ್ರದೇಶ ನಾಶವಾಗಿದೆ’ ಎಂದು ಮೊಹಮದ್ ಇ ಮೇಲ್ ಕಳುಹಿಸಿದ್ದು, ‘ಏಳು ಜನರ ಶವಗಳು ಅಲ್ಲಿ ಬಿದ್ದಿದ್ದು, ಬಹುತೇಕ ಎಲ್ಲವೂ ಸುಟ್ಟು ಕರಕಲಾಗಿವೆ’ ಎಂದು ಮತ್ತೊಂದು ಸಂದೇಶದಲ್ಲಿ ಬರೆದಿದ್ದಾರೆ.

Comments are closed.