ರಾಷ್ಟ್ರೀಯ

ರಾಜನ್ ಅಧಿಕಾರಾವಧಿ ವಿಸ್ತರಣೆಗೆ ಸಿಐಐ ಬೆಂಬಲ

Pinterest LinkedIn Tumblr

rajan2ಒಸಾಕಾ (ಜಪಾನ್ ) (ಪಿಟಿಐ): ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಂ ರಾಜನ್ ಅವರನ್ನು ಹುದ್ದೆಯಿಂದ ಕೆಳಗಿಳಿಸಿ ಎಂಬ ಒತ್ತಾಯ ಕೇಳಿ ಬರುತ್ತಿರುವ ವೇಳೆಯೆ ರಾಜನ್ ಅವರ ಅಧಿಕಾರಾವಧಿ ವಿಸ್ತರಿಸುವುದಕ್ಕೆ ಭಾರತೀಯ ಕೈಗಾರಿಕಾ ಒಕ್ಕೂಟ(ಸಿಐಐ) ಗುರುವಾರ ಬೆಂಬಲ ಸೂಚಿಸಿದೆ.

ರಾಜನ್ ಅವರು ದೇಶಕ್ಕಾಗಿ ಉತ್ತಮ ಕೆಲಸ ಮಾಡಿದ್ದಾರೆ. ಅವರ ಮೇಲೆ ವೈಯಕ್ತಿಕ ಟೀಕೆ ಮಾಡುವುದು ಸಲ್ಲದು ಎಂದು ಸಿಐಐ ಹೇಳಿದೆ.

ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಮಾತನ್ನು ಅನುಮೋದಿಸಿದ ಸಿಐಐ ಅಧ್ಯಕ್ಷ ನೌಶಾದ್ ಫೋರ್ಬ್ಸ್, ರಾಜನ್ ವಿರುದ್ಧ ವೈಯಕ್ತಿಕ ಟೀಕೆ ಮಾಡುವುದು ಅನವಶ್ಯಕ. ಜೇಟ್ಲಿ ಅವರು ಹೇಳಿದ ಮಾತನ್ನೇ ನಾನು ಪುನರುಚ್ಛರಿಸುತ್ತಿದ್ದೇನೆ. ಜೇಟ್ಲಿ ಹೇಳಿಕೆಗೆ ನನ್ನ ಸಂಪೂರ್ಣ ಸಹಮತವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆರ್‍ಬಿಐ ಗವರ್ನರ್ ರಾಜನ್ ಅವರ ಅಧಿಕಾರಾವಧಿ ಸೆಪ್ಟೆಂಬರ್‍ಗೆ ಕೊನೆಯಾಗಲಿದೆ.

Comments are closed.