ಅಂತರಾಷ್ಟ್ರೀಯ

ಮಹಿಳೆಯರನ್ನು ಆನ್ ಲೈನ್ ಮಾರಾಟಕ್ಕಿಟ್ಟ ಇಸಿಸ್!

Pinterest LinkedIn Tumblr

isis-selling-women-wp-e1464517160304ವಾಷಿಂಗ್ಟನ್: ಒಂದಲ್ಲ ಒಂದು ಕೃತ್ಯವೆಸಗಿ ಜನರನ್ನು ಭಯಭೀತಗೊಳಿಸುವ ಇಸಿಸ್ ಸಂಘಟನೆ ಇದೀಗ ಮಹಿಳೆಯರನ್ನು ಆನ್ ಲೈನ್ ಮಾರಾಟಕ್ಕಿಟ್ಟಿದೆ.

ಈ ಬಗ್ಗೆ ಅಮೆರಿಕ ಖ್ಯಾತ ಆಂಗ್ಲ ಧೈನಿಕ ವಾಷಿಂಗ್ ಟನ್ ಪೋಸ್ಟ್ ವರದಿ ಮಾಡಿದ್ದು, ಫೇಸ್ ಬುಕ್ ಖಾತೆಯೊಂದರಲ್ಲಿ ಯಜಿದಿ ಯುವತಿಯೊಬ್ಬಳ ಫೋಟೋ ಹಾಕಿರುವ ಇಸಿಸ್ ಆಕೆ ಮಾರಾಟಕ್ಕಿದ್ದಾಳೆ ಎಂದು ಫೋಟೋ ಅಡಿ ಟಿಪ್ಪಣಿ ನೀಡಿದೆ. ಈ ಫೋಟೊಗೆ ಸಂಬಂಧಿಸಿದಂತೆ ವಿವರಣೆ ನೀಡಿರುವ ಇಸಿಸ್, ಲೈಂಗಿಕ ಗುಲಾಮ ಯುವತಿಯರ ಖರೀದಿಸಲು ಕಾದಿದ್ದವರಿಗೆ ಇಲ್ಲೊಬ್ಬಾಕೆ ಇದ್ದಾಳೆ. ಈಕೆ 18 ವರ್ಷದ ವರ್ಜಿನ್ ಯುವತಿಯಾಗಿದ್ದು, ಈಕೆಯ ಬೆಲೆ 8 ಸಾವಿರ ಅಮೆರಿಕನ್ ಡಾಲರ್ ಎಂದು ಹೇಳಿದೆ.

ಮೂಲಗಳ ಪ್ರಕಾರ ಅಸದ್ ಅಲ್ಮಾನಿ ಎಂಬ ಇಸಿಸ್ ಉಗ್ರಗಾಮಿ ಸಂಘಟನೆಯ ಬೆಂಬಲಿಗ ಅಬು ಅಸ್ಸದ್ ಅಲ್ಮಾನಿ ಎಂಬಾತ ಈ ಪೋಸ್ಟ್ ಅನ್ನು ಹಾಕಿದ್ದು, ಈ ಪೋಸ್ಟ್ ಹಾಕಿದ ಕೆಲ ಹೊತ್ತಿನ ನಂತರ ಮತ್ತೊಬ್ಬ ಯುವತಿಯ ಫೋಟೋ ಹಾಕಿ ಈಕೆಯ ಬೆಲೆ ಕೂಡ 8 ಸಾವಿರ ಡಾಲರ್ ಎಂದು ಹೇಳಿದ್ದಾನೆ.

ಆದರೆ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ ಈ ಪೋಸ್ಚ್ ಡಿಲೀಟ್ ಆಗಿದ್ದು, ಫೇಸ್ ಬುಕ್ ಖಾತೆದಾರರನೇ ಡಿಲೀಟ್ ಮಾಡಿದ್ದಾನೆಯೇ ಅಥವಾ ಫೇಸ್ ಬುಕ್ ನಿರ್ವಹಣಾ ಸಿಬ್ಬಂದಿ ತೆಗೆದುಹಾಕಿದ್ದಾರೆಯೇ ಎಂಬುದು ಪತ್ತೆಯಾಗಿಲ್ಲ.

ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Comments are closed.