ಅಂತರಾಷ್ಟ್ರೀಯ

ಅಳು ನಿಲ್ಲಿಸಲಿಲ್ಲ ಎಂದು ಹೆತ್ತ ಮಗುವನ್ನೇ ಕೊಂದಳು!

Pinterest LinkedIn Tumblr

aishia-marie-pacheco-e1464530766242ವಾಷಿಂಗ್ಟನ್: ಅಮೆರಿಕದ ಉತ್ತರ ಕ್ಯಾರೋಲಿನಾದಲ್ಲಿ ಅಯಿಯಾ ಮೇರಿ ಪಚೇಕೊ ಎಂಬಾಕೆ ತನ್ನ ಮಗು ಅತ್ತಿದ್ದಕ್ಕಾಗಿ ಮಗುವಿನ ಎದೆಯ ಮೇಲೆ ಬಲವಾಗಿ ಕೈ ಊರಿದ್ದು, ಉಸಿರಾಡಲು ಸಾಧ್ಯವಾಗದೆ ಮಗು ಸಾವಿಗೀಡಾಗಿದೆ.

ಇದು ಆಕಸ್ಮಾತಾಗಿ ನಡೆದ ಘಟನೆ. ಮಗುವನ್ನು ಕೊಲ್ಲಬೇಕೆಂಬ ಉದ್ದೇಶವಿರಲಿಲ್ಲ ಎಂದಿದ್ದಾಳೆ. ಮಗು ಮೇ 20ರಂದು ಹುಟ್ಟಿದ್ದು, ಮಗು ಹುಟ್ಟಿ 15 ದಿನ ಸಹ ಕಳೆದಿರಲಿಲ್ಲ. ನನ್ನ ಮಗುವನ್ನು ತುಂಬಾ ಪ್ರೀತಿಸುತ್ತೇನೆ. ತಾಯಿ ಎನಿಸಿಕೊಳ್ಳಲು ನನಗೆ ಹೆಮ್ಮೆ ಎಂದು ಈ ಹಿಂದೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಳು.

ತಾಯಿಯ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾಳೆ.

Comments are closed.