ಅಂತರಾಷ್ಟ್ರೀಯ

ಸಿರಿಯಾದಲ್ಲಿ ಬಾಂಬ್ ಸ್ಪೋಟಕ್ಕೆ 100ಕ್ಕೂ ಹೆಚ್ಚು ಬಲಿ

Pinterest LinkedIn Tumblr

siriyaಬೀರೂತ್: ಸಿರಿಯಾದ ಎರಡು ಕಡೆಗಳಲ್ಲಿ ಸೋಮವಾರ ಐಸಿಸ್ ಜಿಹಾದಿಗಳು ನಡೆಸಿದ ಬಾಂಬ್ ದಾಳಿಯಲ್ಲಿ 120ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

ಜಬ್ಲೆಹ್ ಮತ್ತು ಟಾರ್ಟಸ್ ನಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಸುಮಾರು 120ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವುದಾಗಿ ಸಿರಿಯಾದ ಮಾನವ ಹಕ್ಕುಗಳ ಮೇಲ್ವಿಚಾರಣಾ ವೀಕ್ಷಣಾಲಯ ತಿಳಿಸಿದೆ.

ಇದು 2011ರ ನಂತರ ನಡೆದ ಅತ್ಯಂತ ಭೀಕರ ಬಾಂಬ್ ದಾಳಿ ಎಂದು ವೀಕ್ಷಣಾಲಯದ ಅಧಿಕಾರಿ ರಮಿ ಅಬ್ದುಲ್ ರಹ್ಮಾನ್ ತಿಳಿಸಿದ್ದಾರೆ.

ಈ ಎರಡೂ ಕಡೆ ಬಾಂಬ್ ದಾಳಿ ನಡೆಸಿರುವುದಾಗಿ ಇಸ್ಲಾಮಿಕ್ ಸ್ಪೇಟ್ ಸಂಘಟನೆ ತನ್ನ ವಾರ್ತಾ ಸಂಸ್ಥೆ ಅಮಾಖ್ ನಲ್ಲಿ ತಿಳಿಸಿದೆ.

Comments are closed.