ಅಂತರಾಷ್ಟ್ರೀಯ

ಟ್ರಂಪ್-ಪುಟಿನ್ ಪರಸ್ಪರ ಚುಂಬನ: ಜಗತ್ತಿನಾದ್ಯಂತ ವೈರಲ್ ಆಯ್ತು ಚಿತ್ರ

Pinterest LinkedIn Tumblr

putin-trump

ವಾಷಿಂಗ್ಟನ್: ರಷ್ಯಾದ ಮಾಜಿ ಪ್ರಧಾನಿ ವ್ಲಾಡಿಮಿರ್ ಪುಟಿನ್ ಹಾಗೂ ಅಮೆರಿಕದ ಅಧ್ಯಕ್ಷೀಯ ಪ್ರಬಲ ಆಕಾಂಕ್ಷಿ ಡೊನಾಲ್ಡ್ ಟ್ರಂಪ್ ಪರಸ್ಪರ ಚುಂಬಿಸಿಕೊಂಡಿರುವ ಚಿತ್ರ ಇದೀಗ ಜಗತ್ತಿನಾದ್ಯಂತ ವೈರಲ್ ಆಗಿದೆ.

ಅರೆ..ಇದೇನಿದು ಪುಟಿನ್ ಮತ್ತು ಟ್ರಂಪ್ ಪರಸ್ಪರ ಚುಂಬಿಸಿಕೊಂಡಿದ್ದಾರೆಯೇ ಎಂದು ನೀವು ಯೋಚಿಸಿದರೆ ಅದು ನಿಮ್ಮ ತಪ್ಪು. ಏಕೆಂದರೆ ಇದು ಕಲಾವಿದನೋರ್ವನ ಸೃಷ್ಟಿ. ಹೌದು, ಲಿಥುವೇನಿಯಾದ ವಿಲ್ನಿಯಸ್ ನಗರದ ರೆಸ್ಟೋರೆಂಟ್ಗೆ ಭೇಟಿ ನೀಡಿದರೆ ಮುಂಭಾಗದ ಗೋಡೆಯ ಮೇಲೆ ಪುಟಿನ್ ಹಾಗೂ ಟ್ರಂಪ್ ಚುಂಬಿಸಿಕೊಳ್ಳುವ ಬೃಹದಾಕಾರದ ಉಬ್ಬು ಚಿತ್ರ ಗೋಚರಿಸುತ್ತದೆ. ಈ ರೀತಿ ಕಲ್ಪನೆಯಲ್ಲಿ ಚಿತ್ರ ಬರೆದದ್ದು ಸ್ಥಳೀಯ ಕಲಾವಿದ ಮಿಂಡೋಗಸ್ ಬೊನಾನು.

ಹಲವು ವಿಚಾರಗಳಲ್ಲಿ ಅಮೆರಿಕ ಮತ್ತು ರಷ್ಯಾ ದೇಶಗಳ ನಡುವೆ ಮೊದಲಿನಿಂದಲೂ ಶೀತಲ ಸಮರ ನಡೆಯುತ್ತಿದ್ದು, ಉಭಯ ದೇಶಗಳ ಸಂಬಂಧ ಸುಧಾರಿಸಬೇಕು ಎನ್ನುವ ಭಾವನೆಯಲ್ಲಿ ಕಲಾವಿದ ಮಿಂಡೋಗಸ್ ಬೊನಾನು ಈ ಚಿತ್ರ ಬಿಡಿಸಿದ್ದಾನಂತೆ. ಈತನ ಈ ಕಾರ್ಯಕ್ಕೆ ರೆಸ್ಟೋರೆಂಟ್ನ ಸಹ ಮಾಲೀಕ ಡೊಮಿನ್ಯುಕಾಸ್ ಸೆಕುಸ್ಕಾಸ್ ಬೆನ್ನೆಲುಬಾಗಿ ನಿಂತಿದ್ದು, ಕಲಾವಿದನ ಈ ಸೃಷ್ಟಿ ಇದೀಗ ಜಗತ್ತಿನಾದ್ಯಂತ ವೈರಲ್ ಆಗಿದೆ. ಅಲ್ಲದೆ ಕಲಾವಿದನ ಅದ್ಭುತ ಪೇಟಿಂಗ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿವೆ.

ಈ ಹಿಂದೆ 1979ರಲ್ಲಿ ಸೋವಿಯತ್ ನಾಯಕ ಲಿಯೋನಿದ್ ಬ್ರೆಝೆನೇವ್ ಮತ್ತು ಪೂರ್ವ ಜರ್ಮನ್ ಅಧ್ಯಕ್ಷ ಎರಿಕ್ ಹೊನೆಕ್ಕರ್ ಪರಸ್ಪರ ಚುಂಬಿಸಿಕೊಂಡಿದ್ದರು. ಈ ಪೋಟೋವನ್ನೇ ಮಾದರಿಯಾಗಿಟ್ಟುಕೊಂಡು ಕಲಾವಿದ ಮಿಂಡೋಗಸ್ ಪುಟಿನ್-ಟ್ರಂಪ್ ಚಿತ್ರ ಬರೆದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಸೆಕುಸ್ಕಾಸ್, ನಮಗೆ ಈ ರೀತಿ ಉಬ್ಬು ಚಿತ್ರ ನಿರ್ವಿುಸಲು ಸೋವಿಯತ್ ಯುಗದಲ್ಲಿನ ಅಪರೂಪದ ಚಿತ್ರವೇ ಪ್ರೇರಣೆ. ಇಬ್ಬರು ಮಹಾನ್ ನಾಯಕರು ಬಹುಮುಖಿ ವ್ಯಕ್ತಿತ್ವ ಹೊಂದಿದ್ದು, ಉಭಯ ದೇಶಗಳ ನಡುವೆ ಶೀತಲ ಸಮರ ಏರ್ಪಡದಂತೆ ಉತ್ತಮ ಬಾಂಧವ್ಯ ನಿರ್ವಿುಸುವುದು ನಮ್ಮ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.

ಜಾಗತಿಕ ಮಟ್ಟದಲ್ಲಿ ಉತ್ತಮ ಬಾಂಧವ್ಯ ಹೊಂದಿರುವ ಟ್ರಂಪ್-ಪುಟಿನ್
ರಷ್ಯಾ-ಅಮೆರಿಕ ದೇಶಗಳ ನಡುವೆ ರಾಜಕೀಯವಾಗಿ ಎಷ್ಟೇ ವೈಷಮ್ಯಗಳಿದ್ದರೂ, ಅಮೆರಿಕದ ಅಧ್ಯಕ್ಷೀಯ ಆಕಾಂಕ್ಷಿ ಡೊನಾಲ್ಡ್ ಟ್ರಂಪ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ ಮಾತ್ರ ಉತ್ತಮ ಸ್ನೇಹ-ಬಾಂಧವ್ಯವಿದೆ. ಈ ಹಿಂದೆ ಹಲವು ಕಾರ್ಯಕ್ರಮಗಳಲ್ಲಿ ಉಭಯ ನಾಯಕರು ಪರಸ್ಪರರನ್ನು ಹೊಗಳುವ ಮೂಲಕ ತಮ್ಮ ಅಭಿಮಾನವನ್ನು ಹೊರಹಾಕಿದ್ದರು.

Write A Comment