ಅಂತರಾಷ್ಟ್ರೀಯ

ಮಾಲಿನ್ಯ ತಡೆಗೆ ಜಗತ್ತಿಗೆ ಮಾದರಿ ಪುಟ್ಟ ದೇಶ ಭೂತಾನ್

Pinterest LinkedIn Tumblr

bhutan

ವಾಷಿಂಗ್‌ಟನ್: ಹವಾಮಾನ ಬದಲಾವಣೆ ಮತ್ತು ಪರಿಸರ ಸಂರಕ್ಷಣೆಯಲ್ಲಿ ಪುಟ್ಟ ದೇಶ ಭೂತಾನ್ ಜಾಗತಿಕವಾಗಿ ಮಾದರಿ ರಾಷ್ಟ್ರವಾಗಿದೆ ಎಂದು ಅಮೆರಿಕಾ ಹೇಳಿದೆ.

ಭೂತಾನ್ ತಾನು ಹೊರ ಹಾಕುವ ಇಂಗಾಲವನ್ನು (ಕಾರ್ಬನ್ ಡೈಯಾಕ್ಸೈಡ್)ಗಿಂತ ಮೂರು ಪಾಲು ಹೀರಿ ಕೊಳ್ಳುವ ಮೂಲಕ ತಾಪಮಾನ ಏರಿಕೆ ತಗ್ಗಿಸುವಲ್ಲಿ ಜಾಗತಿಕವಾಗಿ ಮಾದರಿ ರಾಷ್ಟ್ರವಾಗಿದೆ ಎಂದು ಸೌತ್ ಅಂಡ್ ಸೆಂಟ್ರಲ್ ಏಷ್ಯಾ ವ್ಯವಹಾರಗಳ ವಿದೇಶಾಂಗ ಉಪಕಾರ್ಯದರ್ಶಿ ನಿಷಾ ದೇಸಾಯಿ ಬಿಸ್ವಾಲ್ ಹೇಳಿದ್ದಾರೆ. ಇವರು ಭಾರತ ಮೂಲದ ಅಮೆರಿಕಾದವರಾಗಿದ್ದಾರೆ.

ಸಂವಿಧಾನದಲ್ಲಿ ಭೂತಾನ್ ಸಂವಿಧಾನದ ಪ್ರಕಾರ ಆ ರಾಷ್ಟ್ರ ಶೇ. 60ರಷ್ಟು ಭಾಗದಲ್ಲಿ ಅರಣ್ಯ ಹೊಂದಿರಬೇಕು. ಆದರೆ ಅದಕ್ಕಿಂತಲೂ ಹೆಚ್ಚಾಗಿ ಶೇ. 72 ಭಾಗದಷ್ಟು ಪ್ರದೇಶದಲ್ಲಿ ಭೂತಾನ್ ಅರಣ್ಯ ಹೊಂದಿದ್ದು, ಇದು ಹವಾಮಾನ ಬದಲಾವಣೆ ಮತ್ತು ಪರಿಸರ ಸಂರಕ್ಷಣೆ ಮೇಲ್ಪಂಕ್ತಿಯಾಗಿದೆ ಎಂದು ಅಮೆರಿಕಾ ಹೇಳಿದೆ.

Write A Comment