ಮನೋರಂಜನೆ

ಸನ್‌ರೈಸರ್ಸ್‌ಹೈದರಾಬಾದ್‌ತಂಡವನ್ನು ಏಳು ವಿಕೆಟ್‌ಗಳಿಂದ ಮಣಿಸಿದ ಡೆಲ್ಲಿ ಡೇರ್‌ಡೆವಿಲ್ಸ್

Pinterest LinkedIn Tumblr

sanju-pant

ಹೈದರಾಬಾದ್‌: ಕರಾರು ವಾಕ್ಕಾದ ಬೌಲಿಂಗ್ ಮೂಲಕ ಎದುರಾಳಿ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದ ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಐಪಿಎಲ್‌ಒಂಬತ್ತನೇ ಆವೃತ್ತಿಯ ಗುರುವಾರದ ಪಂದ್ಯದಲ್ಲಿ ಬಲಿಷ್ಠ ಸನ್‌ರೈಸರ್ಸ್‌ಹೈದರಾಬಾದ್‌ತಂಡ ವನ್ನು ಏಳು ವಿಕೆಟ್‌ಗಳಿಂದ ಮಣಿಸಿತು.

ಇಲ್ಲಿನ ಉಪ್ಪಳದ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ಟಾಸ್‌ಸೋತರೂ ಮೊದಲು ಬ್ಯಾಟ್‌ಮಾಡಿದ ಸನ್‌ರೈಸರ್ಸ್‌ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 146ರನ್‌ಪೇರಿಸಿತು.

ಯುವ ಆಟಗಾರರನ್ನೇ ಹೆಚ್ಚಾಗಿ ಹೊಂದಿರುವ ಡೆಲ್ಲಿ ತಂಡ ಸಾಧಾರಣ ಗುರಿಯನ್ನು 18.1 ಓವರ್‌ಗಳಲ್ಲಿ ಮೂರು ವಿಕೆಟ್‌ಕಳೆದುಕೊಂಡು ತಲುಪಿತು.
ಈ ಪಂದ್ಯದಲ್ಲಿ ಸೋತರೂ ಡೇವಿಡ್‌ವಾರ್ನರ್‌ನಾಯಕತ್ವದ ಸನ್‌ರೈಸರ್ಸ್ ತಂಡದ ಸ್ಥಾನದಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ. ಆದ್ದರಿಂದ ತಂಡ ಪಾಯಿಂಟ್ಸ್‌ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಉಳಿಯಿತು.

ದಿಟ್ಟ ಆರಂಭ: ಸವಾಲಿನ ಗುರಿ ಕಲೆ ಹಾಕುವ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದ ಸನ್‌ರೈಸರ್ಸ್ ತಂಡಕ್ಕೆ ಉತ್ತಮ ಆರಂಭವೇ ಲಭಿಸಿತು. ನಂತರ ಪ್ರಮುಖ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ಪರದಾಡಿತು. ಡೇವಿಡ್‌ವಾರ್ನರ್‌(46; 30ಎ, 6ಬೌಂ., 1ಸಿ.) ಅವರನ್ನು ಹೊರತು ಪಡಿಸಿದರೆ ಉಳಿದವರು ಅಬ್ಬರಿಸಲಿಲ್ಲ. ನಾಯಕ ವಾರ್ನರ್‌ಮತ್ತು ಶಿಖರ್‌ಧವನ್‌(34; 37ಎ, 3ಬೌಂ) ಮೊದಲ ವಿಕೆಟ್‌ಗೆ 53 ಎಸೆತಗಳಲ್ಲಿ 67ರನ್‌ಪೇರಿಸಿ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು.

ಹೀಗಾಗಿ ತಂಡ ಸವಾಲಿನ ಮೊತ್ತ ಪೇರಿಸಬಹುದು ಎಂದು ತವರಿನ ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ 9ನೇ ಓವರ್‌ನ ಐದನೇ ಎಸೆತದಲ್ಲಿ ವಾರ್ನರ್‌ಅವರನ್ನು ಬೌಲ್ಡ್‌ಮಾಡಿದ ಜಯಂತ್‌ಯಾದವ್‌ಈ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದರು. ಆ ಬಳಿಕ ಧವನ್‌ಮತ್ತು ಕೇನ್‌ವಿಲಿಯಮ್ಸನ್‌(27; 24ಎ, 3ಬೌಂ) ತಂಡಕ್ಕೆ ಆಸರೆಯಾಗುವ ಲಕ್ಷಣ ತೋರಿದ್ದರು.

13ನೇ ಓವರ್‌ಬೌಲ್‌ಮಾಡಿದ ಅನುಭವಿ ಸ್ಪಿನ್ನರ್‌ಅಮಿತ್‌ಮಿಶ್ರಾ ಕೊನೆಯ ಎಸೆತದಲ್ಲಿ ಶಿಖರ್‌ಅವರಿಗೆ ಪೆವಿಲಿಯನ್‌ಹಾದಿ ತೋರಿಸಿ ಡೆಲ್ಲಿ ಪಾಳಯದಲ್ಲಿ ನೆಮ್ಮದಿ ತಂದರು. ಆ ಬಳಿಕ ಬಂದ ಯುವರಾಜ್‌ಸಿಂಗ್‌ಅವರು ಮಿಶ್ರಾ ಓವರ್‌ನಲ್ಲಿ ಸೊಗಸಾದ ಸಿಕ್ಸರ್‌ಸಿಡಿಸಿ ಅಬ್ಬರಿಸುವ ಸೂಚನೆ ನೀಡಿದ್ದರು. ಆದರೆ ಮಿಶ್ರಾ ಇದಕ್ಕೆ ಅವಕಾಶ ನೀಡಲಿಲ್ಲ. 15ನೇ ಓವರ್‌ನ ಕೊನೆಯ ಎಸೆತದಲ್ಲಿ ಯುವಿ ವಿಕೆಟ್‌ಉರುಳಿಸಿದ ಅವರು ಸನ್‌ರೈಸರ್ಸ್‌ಬ್ಯಾಟಿಂಗ್‌ಶಕ್ತಿಗೆ ಪೆಟ್ಟು ನೀಡಿದರು. ಆಸ್ಟ್ರೇಲಿಯಾದ ಆಲ್‌ರೌಂಡರ್‌ಮೊಯಿಸಸ್‌ಹೆನ್ರಿಕ್ಸ್‌ಗೆ (0) ತಳವೂರಲು ಮೊಹಮ್ಮದ್‌ಶಮಿ ಅವಕಾಶ ನೀಡಲಿಲ್ಲ.

ಒಂದೆಡೆ ವಿಕೆಟ್‌ಉರುಳುತ್ತಿದ್ದರೂ ಛಲ ಬಿಡದ ವಿಲಿಯಮ್ಸನ್‌ಕೆಲ ಹೊತ್ತು ತಾಳ್ಮೆಯ ಆಟ ಆಡಿ ತಂಡದ ಮೊತ್ತ ಹಿಗ್ಗಿಸುವ ಪ್ರಯತ್ನ ನಡೆಸಿದರು.
ದೀಪಕ್‌ಹೂಡಾ (10) ಹಿಟ್‌ವಿಕೆಟ್‌ಆದರು. ಇದರ ಬೆನಲ್ಲೆ ವಿಲಿಯಮ್ಸನ್‌ ವಿಕೆಟ್‌ಕೂಡಾ ಪತನವಾಯಿತು. ವಿಕೆಟ್‌ಕೀಪರ್‌ಬ್ಯಾಟ್ಸ್‌ಮನ್‌ನಮನ್‌ಓಜಾ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಡೆವಿಲ್ಸ್‌ಪರ ಅಮಿತ್‌ಮಿಶ್ರಾ ಮತ್ತು ನಥಾನ್‌ಕೌಲ್ಟರ್‌ನೈಲ್‌ತಲಾ ಎರಡು ವಿಕೆಟ್‌ಉರುಳಿಸಿ ಗಮನಸೆಳೆದರು.

ಕಾಕ್‌ಉತ್ತಮ ಆರಂಭ: ಗೆಲುವಿಗೆ ಸಾಧಾರಣ ಗುರಿಯಿದ್ದ ಕಾರಣ ಡೇರ್‌ಡೆವಿಲ್ಸ್ ತಂಡ ಸುಲಭವಾಗಿ ರನ್ ಕಲೆ ಹಾಕಿತು. ಇದಕ್ಕೆ ಕಾರಣವಾಗಿದ್ದು ಆರಂಭಿಕ ಬ್ಯಾಟ್ಸ್‌ಮನ್‌ಕ್ವಿಂಟನ್‌ಡಿ ಕಾಕ್‌ ಜವಾಬ್ದಾರಿಯುತ ಬ್ಯಾಟಿಂಗ್‌. 31 ಎಸೆತಗಳನ್ನು ಎದುರಿಸಿದ ಕಾಕ್‌ಐದು ಬೌಂಡರಿ ಮತ್ತು ಎರಡು ಸಿಕ್ಸರ್‌ಸೇರಿದಂತೆ 44 ರನ್ ಗಳಿಸಿದರು. ಇವರ ಜೊತೆ ಮಯಂಕ್‌ಅಗರವಾಲ್‌ಹತ್ತು ರನ್ ಬಾರಿಸಿದರು.

ಎರಡನೇ ವಿಕೆಟ್‌ಗೆ ಡಿ ಕಾಕ್‌ಮತ್ತು ಭರವಸೆಯ ಬ್ಯಾಟ್ಸ್‌ಮನ್‌ಕರುಣ್‌ನಾಯರ್ ನಡುವಣ ಜೊತೆಯಾಟದಲ್ಲಿ ಬಂದ 55 ರನ್‌ಗಳು ಮತ್ತು ನಾಲ್ಕನೇ ವಿಕೆಟ್‌ಗೆ ಸಂಜು ಸ್ಯಾಮ್ಸನ್‌ಹಾಗೂ ರಿಷಬ್‌ಪಂಥ್‌ಮುರಿಯದ ಜೊತೆಯಾಟದಲ್ಲಿ ಗಳಿಸಿದ 72 ರನ್‌ಪಂದ್ಯದ ಗತಿಯನ್ನೇ ಬದಲಿಸಿತು.
ಈ ಎರಡು ಮಹತ್ವದ ಜೊತೆಯಾಟಗಳು ಡೆಲ್ಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದವು.

ಸ್ಕೋರ್‌ಕಾರ್ಡ್‌
ಸನ್‌ರೈಸರ್ಸ್‌ಹೈದರಾಬಾದ್‌8ಕ್ಕೆ 146
(20 ಓವರ್‌ಗಳಲ್ಲಿ)

ಡೇವಿಡ್‌ವಾರ್ನರ್‌ಬಿ ಜಯಂತ್‌ಯಾದವ್‌ 46
ಶಿಖರ್‌ಧವನ್‌ಸಿ ಸಂಜು ಸ್ಯಾಮ್ಸನ್‌ಬಿ ಅಮಿತ್‌ಮಿಶ್ರಾ 34
ಕೇನ್‌ವಿಲಿಯಮ್ಸನ್‌ಬಿ ಕ್ರಿಸ್‌ಮೊರಿಸ್‌ 27
ಯುವರಾಜ್‌ಸಿಂಗ್‌ಸಿ ರಿಷಭ್‌ಪಂತ್‌ಬಿ ಅಮಿತ್‌ಮಿಶ್ರಾ 08
ಮೊಯಿಸಸ್‌ಹೆನ್ರಿಕ್ಸ್‌ಎಲ್‌ಬಿಡಬ್ಲ್ಯು ಬಿ ಮೊಹಮ್ಮದ್‌ಶಮಿ 00
ದೀಪಕ್‌ಹೂಡಾ ಹಿಟ್‌ವಿಕೆಟ್‌ಬಿ ನಥಾನ್‌ಕೌಲ್ಟರ್‌ನೈಲ್‌ 10
ನಮನ್‌ಓಜಾ ಸಿ ಸಂಜು ಸ್ಯಾಮ್ಸನ್‌ಬಿ ನಥಾನ್‌ಕೌಲ್ಟರ್‌ನೈಲ್‌ 07
ಭುವನೇಶ್ವರ್‌ಕುಮಾರ್‌ರನ್‌ಔಟ್‌(ಮೊರಿಸ್‌) 01
ಬರೀಂದರ್‌ಸರನ್‌ಔಟಾಗದೆ 01
ಆಶಿಶ್‌ನೆಹ್ರಾ ಔಟಾಗದೆ 01
ಇತರೆ: (ಲೆಗ್‌ಬೈ 6, ವೈಡ್‌3, ನೋಬಾಲ್‌2) 11
ವಿಕೆಟ್‌ಪತನ: 1–67 (ವಾರ್ನರ್‌; 8.5), 2–98 (ಧವನ್‌; 12.6), 3–113 (ಯುವರಾಜ್‌; 14.6), 4–114 (ಹೆನ್ರಿಕ್ಸ್‌; 15.2), 5–135 (ಹೂಡಾ; 17.5), 6–137 (ವಿಲಿಯಮ್ಸನ್‌; 18.3), 7–138 (ಭುವನೇಶ್ವರ್‌; 18.6), 8–143 (ಓಜಾ; 19.5).
ಬೌಲಿಂಗ್‌: ಜಯಂತ್‌ಯಾದವ್‌4–0–32–1, ನಥಾನ್‌ಕೌಲ್ಟರ್‌ನೈಲ್‌4–0–25–2, ಮೊಹಮ್ಮದ್‌ಶಮಿ 3–0–26–1, ಕ್ರಿಸ್‌ಮೊರಿಸ್‌4–0–19–1, ಜೆಪಿ ಡುಮಿನಿ 2–0–19–0, ಅಮಿತ್‌ಮಿಶ್ರಾ 3–0–19–2.

ಡೆಲ್ಲಿ ಡೇರ್‌ಡೆವಿಲ್ಸ್‌ 3ಕ್ಕೆ 150 (18.1ಓವರ್‌ಗಳಲ್ಲಿ)

ಕ್ವಿಂಟನ್‌ಡಿ ಕಾಕ್‌ಸಿ. ನಮನ್‌ಓಜಾ ಬಿ. ಮೊಯ್ಸಿಸ್‌ಹೆನ್ರಿಕ್ಸ್‌ 44
ಮಯಂಕ್‌ಅಗರವಾಲ್‌ಸಿ. ಯುವರಾಜ್ ಸಿಂಗ್ ಬಿ. ಆಶಿಶ್‌ನೆಹ್ರಾ 10
ಕರುಣ್‌ನಾಯರ್‌ಬಿ. ಮೊಯ್ಸಿಸ್‌ಹೆನ್ರಿಕ್ಸ್‌ 20
ಸಂಜು ಸ್ಯಾಮ್ಸನ್‌ಔಟಾಗದೆ 34
ರಿಷಬ್‌ಪಂಥ್‌ಔಟಾಗದೆ 39
ಇತರೆ: (ವೈಡ್‌–3) 03
ವಿಕೆಟ್‌ಪತನ: 1–20 (ಮಯಂಕ್‌; 3.1), 2–75 (ಕರುಣ್‌; 9.2), 3–78 (ಕ್ವಿಂಟನ್‌; 9.5).
ಬೌಲಿಂಗ್‌: ಭುವನೇಶ್ವರ್‌ಕುಮಾರ್ 4–0–32–0, ಆಶಿಶ್‌ನೆಹ್ರಾ 3–0–23–1, ಬರೀಂದರ್ ಸರನ್‌2–0–21–0, ಮುಸ್ತಫಿಜರ್ ರಹಮಾನ್‌4–0–39–0, ಮೊಯ್ಸಿಸ್ ಹೆನ್ರಿಕ್ಸ್‌3–0–19–2, ದೀಪಕ್‌ಹೂಡಾ 1–0–5–0, ಯುವರಾಜ್‌ಸಿಂಗ್‌1.1–0–11–0.

ಫಲಿತಾಂಶ: ಡೆಲ್ಲಿ ಡೇರ್‌ಡೆವಿಲ್ಸ್ ತಂಡಕ್ಕೆ 7 ವಿಕೆಟ್‌ಜಯ.
ಪಂದ್ಯ ಶ್ರೇಷ್ಠ: ಕ್ರಿಸ್‌ಮಾರಿಸ್‌

Write A Comment