ಅಂತರಾಷ್ಟ್ರೀಯ

ಇರಾಕ್‌: ಕಾರ್‌ ಬಾಂಬ್‌ ಸ್ಫೋಟಕ್ಕೆ 50 ಮಂದಿ ಬಲಿ

Pinterest LinkedIn Tumblr

Iraq-Blastಬಾಗ್ದಾದ್‌ (ರಾಯಿಟರ್ಸ್‌): ಆತ್ಮಹತ್ಯಾ ಕಾರ್ ಬಾಂಬ್‌ ದಾಳಿಯಲ್ಲಿ ಕನಿಷ್ಠ 50 ಜನರು ಮೃತಪಟ್ಟಿರುವ ಘಟನೆ ಇರಾಕ್‌ನಲ್ಲಿ ಬುಧವಾರ ನಡೆದಿದೆ. ಇಸ್ಲಾಮಿಕ್ ಉಗ್ರ ಸಂಘಟನೆ(ಐಎಸ್‌) ದಾಳಿಯ ಹೊಣೆ ಹೊತ್ತಿದೆ.

ಶಿಯಾ ಸಮುದಾಯ ಪ‍್ರಾಬಲ್ಯ ಹೊಂದಿರುವ ಬಾಗ್ದಾದ್‌ನ ಸದ್ರ ನಗರದ ಮಾರುಕಟ್ಟೆ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಸ್ಫೋಟಕಗಳಿಂದ ತುಂಬಿದ್ದ ಎಸ್‌ಯುವಿ ಕಾರು ಬ್ಯೂಟಿ ಸಲೂನ್‌ ಸಮೀಪ ಸ್ಫೋಟಿಸಿದೆ. ಮೃತರಲ್ಲಿ ಹೆಚ್ಚಿನವರು ಮಹಿಳೆಯರು ಎಂದು ಮೂಲಗಳು ಹೇಳಿವೆ.

ಶಿಯಾ ಸೇನಾ ಹೋರಾಟಗಾರರನ್ನು ಗುರಿಯಾಗಿಸಿ ಐಎಸ್‌ನ ಆತ್ಮಹತ್ಯಾ ದಾಳಿಕೋರ ದಾಳಿ ನಡೆಸಿದ್ದಾನೆ ಎಂದು ಅಮಕ್ ಸುದ್ದಿಸಂಸ್ಥೆ ವರದಿ ಮಾಡಿದೆ. ಈ ಸುದ್ದಿಸಂಸ್ಥೆಯು ಐಎಸ್‌ಗೆ ಬೆಂಬಲಿಸುತ್ತದೆ.

Write A Comment