ರಾಷ್ಟ್ರೀಯ

ಎಂದಿಗೂ ಸೋನಿಯಾ, ಸಿಂಗ್ ಭೇಟಿಯಾಗಿಲ್ಲ

Pinterest LinkedIn Tumblr

Sonia+Singh

ನವದೆಹಲಿ (ಪಿಟಿಐ): ಆಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಖರೀದಿ ಒಪ್ಪಂದ ಕುದುರಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅಥವಾ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಎಂದಿಗೂ ಭೇಟಿಯಾಗಿಲ್ಲ ಎಂದು ಮಧ್ಯವರ್ತಿ ಕ್ರಿಶ್ಚಿಯನ್ ಮೈಕಲ್ ಹೇಳಿದ್ದಾರೆ.

‘ಟಿ.ವಿ ಟುಡೇ’ ಸುದ್ದಿವಾಹಿನಿಗೆ ಅಬುಧಾಬಿಯಿಂದ ನೀಡಿದ ಸಂದರ್ಶನದಲ್ಲಿ ಅವರು ಈ ವಿಷಯ ಬಹಿರಂಗ ಪಡಿಸಿದ್ದಾರೆ.

ಒಪ್ಪಂದ ಕುದುರಿಸುವ ಸಂಬಂಧ ಗಾಂಧಿ, ಸಿಂಗ್ ಇಲ್ಲವೇ ಆಗಿನ ರಕ್ಷಣಾ ಸಚಿವ ಎ.ಕೆ.ಆಂಟಿನಿ ಅವರೊಟ್ಟಿಗೆ ಭೇಟಿ ನಡೆದಿತ್ತೇ ಎಂಬ ಪ್ರಶ್ನೆಗೆ ‘ಇಲ್ಲ, ಎಂದಿಗೂ ಇಲ್ಲ. ಇವರಲ್ಲಿ ಯಾರೊಬ್ಬರನ್ನೂ ಎಂದೂ ನಾನು ಭೇಟಿಯಾಗಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಕಿಕ್‌ಬ್ಯಾಕ್‌ ಹಗರಣದಿಂದ ತಮ್ಮ ಹೆಸರನ್ನು ಕೈಬಿಡುವಂತೆ ಕೋರಿದ ಅವರು, ಭಾರತೀಯ ವಾಯು ಪಡೆಯ ಆಗಿನ ಮುಖ್ಯಸ್ಥ ಎಸ್‌.ಪಿ.ತ್ಯಾಗಿ ಅವರ ಕೈಯನ್ನೊಮ್ಮೆ ಕುಲುಕಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ.

ಆದರೆ, ಇಟಲಿ ಉದ್ಯಮಿ ಗುಯಿಡೊ ಹಾಸ್ಚೆಕೆ ಹಾಗೂ ಮತ್ತೊಬ್ಬ ಮಧ್ಯವರ್ತಿಯೊಂದಿಗಿನ ನಂಟಿನಿಂದಾಗಿ ಅವರಿಂದ ಅಂತರ ಕಾಯ್ದುಕೊಂಡಿದ್ದೆ ಎಂದಿದ್ದಾರೆ.

ಒಪ್ಪಂದದ ಕುರಿತು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ಸುಳ್ಳಾಡಿಲ್ಲ. ಆದರೆ, ಪ್ರಕರಣದಲ್ಲಿ ಅವರ ದಾರಿ ತಪ್ಪಿಸಿದಂತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Write A Comment