ಅಂತರಾಷ್ಟ್ರೀಯ

ಬಾಂಗ್ಲಾದಲ್ಲಿ ಸೂಫಿ ಮುಸ್ಲಿಮ್ ನಾಯಕನ ಹತ್ಯೆ: ಐಸಿಸ್ ಭಯೋತ್ಪಾದಕರ ಕೃತ್ಯ ಎಂದು ಶಂಕೆ

Pinterest LinkedIn Tumblr

07-sufi-leadre-killed-bangladesh-webಢಾಕಾ (ಬಾಂಗ್ಲಾದೇಶ): ಬಾಂಗ್ಲಾದೇಶದಲ್ಲಿ ನಡೆದಿರುವ ಶಂಕಿತ ಐಸಿಸ್ ಭಯೋತ್ಪಾದಕ ದಾಳಿಯಲ್ಲಿ ಸ್ಥಳೀಯ ಸೂಫಿ ಮುಸ್ಲಿಮ್ ನಾಯಕನನ್ನು ಕೊಲೆಗೈಯಲಾಗಿದೆ ಎಂದು ಪೊಲೀಸರು ಶನಿವಾರ ಇಲ್ಲಿ ತಿಳಿಸಿದ್ದಾರೆ.

ಉದಾರವಾದಿ ಪ್ರೊಫೆಸರ್ ಒಬ್ಬರನ್ನು ಇದೇ ವಾಯವ್ಯ ಜಿಲ್ಲೆಯಲ್ಲಿ ಐಸಿಸ್ ದಾಳಿಯಲ್ಲಿ ಕೊಲೆಗೈದ ಎರಡು ವಾರಗಳ ಬಳಿಕ ಈ ಕೃತ್ಯ ಘಟಿಸಿದೆ.

‘ಅವರು ಖ್ಯಾತ ಸೂಫಿ ಏನೂ ಆಗಿರಲಿಲ್ಲ. ಆದರೆ ಇಸ್ಲಾಮಿ ಉಗ್ರಗಾಮಿಗಳು ಅವರನ್ನು ಕೊಲೆಗೈದಿರುವ ಶಂಕೆ ಇದೆ’ ಎಂದು ರಾಜ್ಶಾಹಿ ಜಿಲ್ಲಾ ಪೊಲೀಸ್ ಮುಖ್ಯಸ್ಥ ನಿಶಹರುಲ್ ಆರಿಫ್ ಹೇಳಿದ್ದಾರೆ. ಇತ್ತೀಚೆಗೆ ಧಾರ್ಮಿಕ ಅಲ್ಪಸಂಖ್ಯಾತರನ್ನು ಕೊಲ್ಲಲಾಗುತ್ತಿರುವ ಮಾದರಿಯಲ್ಲೇ ಈ ಕೊಲೆಯೂ ನಡೆದಿದೆ ಎಂದು ಅವರು ಹೇಳಿದ್ದಾರೆ.

Write A Comment