ಲಂಡನ್ (ಪಿಟಿಐ): ಪಾಕಿಸ್ತಾನ ಮೂಲದ ಸಾದಿಕ್ ಖಾನ್ ಲಂಡನ್‌ನ ನೂತನ ಮೇಯರ್ ಆಗಿ ಚುನಾಯಿತರಾಗಿದ್ದಾರೆ.
ಸಾದಿಕ್ ಖಾನ್ ಅವರು ಮೇಯರ್ ಹುದ್ದೆಗೆ ತಮ್ಮ ನಿಕಟ ಎದುರಾಳಿಯ ವಿರುದ್ಧ ಪ್ರಚಂಡ ಜಯ ಸಾಧಿಸಿದ್ದಾರೆ.
45ರ ಹರೆಯದ ಸಾದಿಕ್ ಖಾನ್ ಅವರು ಲೇಬರ್ ಪಕ್ಷದ ಅಭ್ಯರ್ಥಿಯಾಗಿದ್ದರು. ತಮ್ಮ ಸಮೀಪದ ಕನ್ಸರ್ವೇಟಿವ್ ಪಕ್ಷದ ಪ್ರತಿಸ್ಪರ್ಧಿಯನ್ನು ಸೋಲಿಸುವ ಮೂಲಕ 8 ವರ್ಷಗಳ ಬಳಿಕ ಲೇಬರ್ ಪಕ್ಷವನ್ನು ಮತ್ತೆ ಆಡಳಿತಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಸಾದಿಕ್ ಖಾನ್ ಅವರು ಬಸ್ ಚಾಲಕನ ಮಗನಾಗಿದ್ದಾರೆ. ‘ಲಂಡನ್ ಜನತೆ ಭಯವನ್ನು ಭರವಸೆಯ ಮೂಲಕ ಗೆದ್ದಿದ್ದಾರೆ’ ಎಂದು ಸಾದಿಕ್ ಖಾನ್ ತಿಳಿಸಿದ್ದಾರೆ.
ಅಂತರಾಷ್ಟ್ರೀಯ