ಅಂತರಾಷ್ಟ್ರೀಯ

ಬೌದ್ಧ ಸನ್ಯಾಸಿಯ ಮೃತದೇಹಕ್ಕೆ ಚಿನ್ನದ ಲೇಪನ!

Pinterest LinkedIn Tumblr

monk

ಬೀಜಿಂಗ್: ಚೀನಾದ ಫುಝಾವೋ ದೇವಾಲಯದಲ್ಲಿ ದೊಡ್ಡ ಮಡಿಕೆಯಲ್ಲಿ ಸಂರಕ್ಷಿಸಲ್ಪಟ್ಟಿದ್ದ ಬೌದ್ಧ ಸನ್ಯಾಸಿಯೊಬ್ಬರ ಚಿನ್ನದ ಲೇಪನವಿರುವ ದೇಹವನ್ನು ಹೊರತೆಗೆಯಲಾಗಿದೆ.

monk1

monk12

monk123

ಈ ದೇಹ ಫು ಹೋ ಎಂಬ ಬೌದ್ಧ ಸನ್ಯಾಸಿಯದ್ದಾಗಿದ್ದು ಇವರು ಕ್ವಾಂಝೌ ನಗರದ ಚೊಂಗ್‍ಫೂ ದೇವಾಲಯದಲ್ಲಿ ತಮ್ಮ ಜೀವಿತಾವಧಿಯನ್ನು ಕಳೆದಿದ್ದರು ಎನ್ನಲಾಗಿದೆ. 2012ರಲ್ಲಿ ಮೃತಪಟ್ಟ ಫು ಹೋ ಅವರಿಗೆ 94 ವರ್ಷ ವಯಸ್ಸಾಗಿತ್ತು. ಇವರ ಮೃತದೇಹಕ್ಕೆ ಚಿನ್ನದ ಲೇಪನ ಮಾಡಿ ಒಂದು ದೊಡ್ಡ ಮಡಿಕೆಯಲ್ಲಿ ಕುಳಿತ ಸ್ಥಿತಿಯಲ್ಲಿ ಇಡಲಾಗಿತ್ತು. ಪುಣ್ಯ ಪುರುಷರ ದೇಹವನ್ನ ಸಂರಕ್ಷಿಸಿಡುವ ಸಲುವಾಗಿ ಬೌದ್ಧರಲ್ಲಿ ಈ ರೀತಿಯ ಪದ್ಧತಿಯಿದೆ ಎನ್ನಲಾಗಿದೆ.

ಇದೀಗ 3 ವರ್ಷಗಳ ನಂತರ ಹೊರತೆಗೆದಿರುವ ದೇಹವನ್ನ ಆಲ್ಕೊಹಾಲ್‍ನಿಂದ ತೊಳೆದು ಮತ್ತೆ ಚಿನ್ನದ ಲೇಪನ ಮಾಡಲಾಗಿದೆ.

Write A Comment