ಅಂತರಾಷ್ಟ್ರೀಯ

ಕ್ರಿಸ್ ಗೇಯ್ಲ್ ಟಿ20 ವೇಗದ ಶತಕ ಸರಿಗಟ್ಟಿದ ಇರಾಕ್ ಥಾಮಸ್ ! 21 ಎಸೆತಗಳಲ್ಲಿ ಶತಕ ಇರಾಕ್‌ ಥಾಮಸ್‌ ವಿಶ್ವದಾಖಲೆ

Pinterest LinkedIn Tumblr

Chris Gayle, Iraq Thomas

ಲೂಯಿಸ್‌ ಡಿ ಓರ್‌(ಜಮೈಕಾ): ಕ್ರಿಕೆಟ್ ನಲ್ಲಿ ಒಬ್ಬರು ಮಾಡಿದ ದಾಖಲೆಗಳನ್ನು ಮತ್ತೊಬ್ಬರು ಮುರಿಯುವುದು ಸಾಮಾನ್ಯ. ಅದರಂತೆ ವೆಸ್ಟ್ ಇಂಡೀಸ್ ನ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ರ ವೇಗದ ಟಿ20 ಶತಕದ ವಿಶ್ವದಾಖಲೆಯನ್ನು 23ರ ಹರೆಯದ ಬ್ಯಾಟ್ಸ್ ಮನ್ ಇರಾಕ್ ಥಾಮಸ್ ಮುರಿದು ಹಾಕಿದ್ದಾರೆ.

ಕೆರಿಬಿಯನ್‌ ದೇಶಿ ಕ್ರಿಕೆಟ್‌ನಲ್ಲಿ ಟ್ರಿನಿಡಾಡ್‌-ಟೊಬಾಗೊ ತಂಡದ ಇರಾಕ್‌ ಥಾಮಸ್‌ ಕೇವಲ 21 ಎಸೆತಗಳಲ್ಲಿ ಶತಕ ಸಿಡಿಸಿದ್ದು, 30 ಎಸೆತಗಳಲ್ಲಿ ಗೇಯ್ಲ್ ಸಿಡಿಸಿದ್ದ ಶತಕದ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.

2013ರ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡಿದ್ದ ಕ್ರಿಸ್‌ ಗೇಯ್ಲ್ ಬೆಂಗಳೂರಿನಲ್ಲಿ ಪುಣೆ ವಾರಿಯರ್ ವಿರುದ್ಧದ ಪಂದ್ಯದಲ್ಲಿ 30 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಇದು ಟಿ-20 ಇತಿಹಾಸದಲ್ಲೇ ಅತೀ ವೇಗದ ಶತಕವಾಗಿತ್ತು. ಈಗ ಈ ಹೆಗ್ಗಳಿಕೆ ಇರಾಕ್‌ ಥಾಮಸ್‌ ಪಾಲಾಗಿದೆ.

ಸಾðಬರೋ-ಮಾಸನ್‌ ಹಾಲ್‌ ಪರ ಆಡಿದ ಥಾಮಸ್ ಎದುರಾಳಿ ಸ್ಪೇಸೈಡ್ ತಂಡದ ಬೌಲರ್ ಗಳನ್ನು ಚೆನ್ನಾಗಿ ದಂಡಿಸಿ 31 ಎಸೆತದಲ್ಲಿ ಅಜೇಯ 131 ರನ್ ಸಿಡಿಸಿದರು. ಈ ವೇಗದ ಶತಕದಲ್ಲಿ 15 ಸಿಕ್ಸರ್ ಹಾಗೂ 5 ಬೌಂಡರಿಗಳನ್ನು ಒಳಗೊಂಡಿದೆ. ಥಾಮಸ್‌ ಭರ್ಜರಿ ಬ್ಯಾಟಿಂಗ್ ನಿಂದಾಗಿ ಸ್ಪೇಸೈಡ್‌ 152 ರನ್ನುಗಳ ಮೊತ್ತವನ್ನು ಸಾðಬರೋ-ಮಾಸನ್‌ ಹಾಲ್‌ ಕೇವಲ 8 ಓವರ್‌ಗಳಲ್ಲಿ ಗುರಿಮುಟ್ಟಿತು.

Write A Comment