ಕರ್ನಾಟಕ

ಸರಳ ವಿವಾಹಕ್ಕೆ ಯದುವೀರ್ ಒಡೆಯರ ಒಲವು: ನಿರ್ಧಾರ ರಾಜಮಾತೆಗೆ ಬಿಟ್ಟದ್ದು

Pinterest LinkedIn Tumblr

yadveer11

ಮೈಸೂರು: ಸರಳ ವಿವಾಹವಾಗುವುದು ನನಗಿಷ್ಟ, ಅದಕ್ಕೆ ನಾನು ಆದ್ಯತೆ ನೀಡುತ್ತೇನೆ ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ.

ರಾಜ್ಯದ ಜನತೆ ಹಲವು ದಿನಗಳಿಂದ ಕುತೂಹಲದಿಂದ ನಿರೀಕ್ಷಿಸುತ್ತಿರುವ ಮೈಸೂರು ರಾಜ ಮನೆತನದ ಅರಸ ಯದುವೀರ್ ಚಾಮರಾಜ ಒಡೆಯರ್ ಅವರ ವಿವಾಹ ಮಹೋತ್ಸವ ಜೂನ್ 27 ಮತ್ತು 28 ಕ್ಕೆ ನಿಗದಿಯಾಗಿದೆ.

ತಮ್ಮ ವಿವಾಹ ಸಮಾರಂಭದ ಕುರಿತು ಮಾತನಾಡಿರುವ ಯದುವೀರ ಒಡೆಯರ್ ಅವರು, ಸರಳ ವಿವಾಹಕ್ಕೆ ನಾನು ಆದ್ಯತೆ ನೀಡುತ್ತೇನೆ. ಆದರೆ ವಿವಾಹ ಹೇಗೆ ನಡೆಯಬೇಕು ಎಂಬುದನ್ನು ತಾಯಿ ಪ್ರಮೋದಾದೇವಿ ಒಡೆಯರ್ ಮತ್ತು ಧರ್ಮಾಧಿಕಾರಿಗಳು ನಿರ್ಧರಿಸುತ್ತಾರೆ ಎಂದ ಅವರು, ಆರತಕ್ಷತೆ ಮತ್ತು ವಿವಾಹ ಮೈಸೂರಿನಲ್ಲೇ ನಡೆಯಲಿದೆ ಎಂದು ತಿಳಿಸಿದ್ದಾರೆ.

ಇನ್ನು ರಾಜಸ್ತಾನದ ದುಂಗಾರ್ಪುರ ರಾಜಮನೆತನದ ರಾಜಕುಮಾರಿ ತ್ರಿಷಿಕಾ ಮತ್ತು ಯದುವೀರ್ ವಿವಾಹಕ್ಕೆ ಮೈಸೂರಿನ ಅಂಬಾ ವಿಲಾಸ ಅರಮನೆ ಸಕಲ ರೀತಿಯಲ್ಲೂ ಸಿದ್ಧಗೊಳ್ಳುತ್ತಿದೆ.

ಸಂಪ್ರದಾಯಬದ್ಧ ವಿವಾಹಕ್ಕೆ ಮೈಸೂರು ಅರಮನೆ ಸಾಕ್ಷಿಯಾಗಲಿದೆ. ಈ ಅದ್ಧೂರಿ ವಿವಾಹಕ್ಕೆ ರಾಜ ಮನೆತನದ ಸದಸ್ಯರು ಮತ್ತು ಗಣ್ಯರು ಹಾಗೂ ಅತೀ ಗಣ್ಯರು ಪಾಲ್ಗೋಳ್ಳಲಿದ್ದಾರೆ.

ಇನ್ನೂ ಅರಮನೆಯ ಒಳಭಾಗದಲ್ಲಿರುವ ಗಣೇಶ ದೇವಾಲಯದಲ್ಲಿ ಚಾಮುಂಡೇಶ್ವರಿ ದೇವಿಯ ಪೂಜಾ ಕೈಂಕರ್ಯ ನಡೆಸಲಾಗುತ್ತದೆ. ಅರಮನೆ ಪೂಜಾರಿಗಳೇ ವಿವಾಹದ ಎಲ್ಲಾ ವಿಧಿವಿಧಾನಗಳನ್ನ ನೇರವೇರಿಸಲಿದ್ದಾರೆ. ತ್ರಿಷಿಕಾ ಪೋಷಕರು ಕೂಡ ಈ ಪೂಜೆಯಲ್ಲಿ ಭಾಗವಹಿಸಲಿದ್ದಾರೆ. 40 ವರ್ಷಗಳ ನಂತರ ಅರಮನೆಯಲ್ಲಿ ನಡೆಯುತ್ತಿರುವ ವಿವಾಹ ಇದಾಗಿದೆ.

Write A Comment