ಅಂತರಾಷ್ಟ್ರೀಯ

ಲಂಡನ್‌ನಲ್ಲಿ ಗ್ರಾಹಕರು ನಗ್ನವಾಗಿ ಆಹಾರ ಸೇವಿಸುವ ಹೋಟೆಲ್ ಆರಂಭ

Pinterest LinkedIn Tumblr

33
ಲಂಡನ್‌: ಮುಂಬರುವ ದಿನಗಳಲ್ಲಿ ಲಂಡನ್‌ನಲ್ಲಿ ಬುನ್‌ಯಾಡಿ ಹೆಸರಿನ ರೆಸ್ಟೋರೆಂಟ್‌ವೊಂದು ಆರಂಭವಾಗುತ್ತಿದ್ದು. ಈ ರೆಸ್ಟೋರೆಂಟ್‌ನಲ್ಲಿ ಊಟಕ್ಕೆ ಬರುವ ಗ್ರಾಹಕರು ತಾವು ತೊಟ್ಟಿರುವ ಬಟ್ಟೆಗಳ ಬಗ್ಗೆ ಚಿಂತೆ ಮಾಡುವುದು ಬೇಡ. ಯಾಕೆಂದರೆ ಹೋಟೆಲ್ ಪ್ರಾರಂಭಿಸಿರುವುದು ನಗ್ನರಾಗಿ ಊಟ ಮಾಡುವ ಗ್ರಾಹಕರಿಗಾಗಿ.

ಇನ್ನೂ ಈ ರೆಸ್ಟೋರೆಂಟ್‌ ಆರಂಭವಾಗದಿದ್ದರೂ ಈ ರೆಸ್ಟೋರೆಂಟ್‌‌ನಲ್ಲಿ ನಗ್ನರಾಗಿ ಭೋಜನ ಸವಿಯಲು ಈಗಾಗಲೇ 30 ಸಾವಿರ ಅತಿಥಿಗಳು ವೆಟಿಂಗ್ ಲಿಸ್ಟ್‌ನಲ್ಲಿದ್ದಾರೆ.

30 ಸಾವಿರ ಗ್ರಾಹಕರು ವೇಟಿಂಗ್ ಲಿಸ್ಟ್‌ನಲ್ಲಿದ್ದರೂ ಕೆಲವರಿಗೆ ಮಾತ್ರ ಹೋಟೆಲ್‌ನ ಊಟದ ಸವಿಯನ್ನು ಅನುಭವಿಸುವ ಅವಕಾಶಗಳಿವೆ.

ಈ ರೆಸ್ಟೋರೆಂಟ್‌‌ ಸೀಮಿತ ಆಸನದ ವ್ಯವಸ್ಥೆಯನ್ನು ಹೊಂದಿದ್ದು, ಜೂನ್ ತಿಂಗಳಲ್ಲಿ ಅನಾವರಣಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ಈ ರೆಸ್ಟೋರೆಂಟ್‌ನಲ್ಲಿ ಊಟಕ್ಕೆ ತೆರಳುವಾಗ ಬಟ್ಟೆ ಧರಿಸಲು ಅನುಮತಿ ನೀಡಲಾಗಿದ್ದರೂ ಬೆತ್ತಲೆ ವಿಭಾಗವನ್ನು ಸಹ ಹೊಂದಿದೆ. ಬೆತ್ತಲೆ ವಿಭಾಗದಲ್ಲಿ ಛಾಯಾಗ್ರಹಣವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ರೆಸ್ಟೋರೆಂಟ್‌ ಗ್ರಾಹಕರಿಗೆ ಗೌನ್‌ಗಳನ್ನು ನೀಡುವ ಸೌಲಭ್ಯವನ್ನು ಒದಗಿಸಿದೆ.

ಪ್ರವರ್ತಕರ ಪ್ರಕಾರ, ಗ್ರಾಹಕರಿಗೆ ಈ ರೆಸ್ಟೋರೆಂಟ್ ಬಟ್ಟೆ ಸೇರಿದಂತೆ ಪೋನ್ ವಿದ್ಯುತ್ ದೀಪಗಳಿಂದ ಬಿಡುಗಡೆ ಪಡೆದಂತಹ ಹೊಸ ವಿಶ್ವವನ್ನು ಸೃಷ್ಟಿಸುವ, ನೈಸರ್ಗಿಕ ಮತ್ತು ಮನೆಯಲ್ಲಿ ಬೆಳೆದ ಪದಾರ್ಥಗಳನ್ನು ಉಪಯೋಗಿಸಿದ ರುಚಿ ಶುಚಿಯಾದ ಊಟ, ಉಪಹಾರವನ್ನು ನೀಡುವಂತಹ ಹೊಸ ಲೋಕಕ್ಕೆ ಕರೆದೊಯ್ಯವ ಅವಕಾಶ ನೀಡಲಿದೆ.

ಈ ರೆಸ್ಟೋರೆಂಟ್, ನೈಸರ್ಗಿಕವಾದ ಮಣ್ಣಿನ ಪಾತ್ರೆಯಲ್ಲಿ ತಯಾರಿಸಿದ ಖಾದ್ಯಗಳನ್ನು ಗ್ರಾಹಕರಿಗೆ ವಿತರಿಸಲಿದೆ ಎಂದು ಮೂಲಗಳು ತಿಳಿಸಿವೆ.

ಈ ರೆಸ್ಟೋರೆಂಟ್‌ನ್ನು ಬಿದಿರು ಮತ್ತು ಬೆತ್ತದಿಂದ ಸೃಜನಾತ್ಮಕವಾಗಿ ಅಲಂಕರಿಸಿದ್ದು, ಗ್ರಾಹಕರು ಛತ್ರಿಯ ಅಡಿಯಲ್ಲಿ ಕುಳಿತು ನೈಸರ್ಗಿಕ ದೀಪದ ಬೆಳಕಿನಲ್ಲಿ ಖಾದ್ಯಗಳನ್ನು ಸವಿಯಬಹುದಾಗಿದೆ ಎಂದು ವರದಿಗಳು ತಿಳಿಸಿವೆ.

ಗ್ರಾಹಕರಿಗೆ ಸಸ್ಯಹಾರ ಮತ್ತು ಮಾಂಸಹಾರದ ಆಹಾರವನ್ನು ಪೊರೈಸಲಾಗುತ್ತಿದ್ದು, ಬೆತ್ತಲೆ ವಿಭಾಗದಲ್ಲಿ ಊಟ ಮಾಡ ಬಯಸುವ ಗ್ರಾಹಕರಿಗೆ ತಮ್ಮ ಬಟ್ಟೆಯನ್ನು ಜೋಪಾನವಾಗಿಟ್ಟು ಗೌನ್‌ಗಳನ್ನು ಧರಿಸಲು ಪ್ರತ್ಯೇಕ ಲಾಕರ್ ವ್ಯವಸ್ಥೆಯನ್ನು ಮಾಡಲಾಗಿದೆ.

Write A Comment