ಅಂತರಾಷ್ಟ್ರೀಯ

ಕಾಬೂಲ್‌ನಲ್ಲಿ ತಾಲಿಬಾನ್‌ ಅಟ್ಟಹಾಸಕ್ಕೆ 28 ಬಲಿ

Pinterest LinkedIn Tumblr

Blastಕಾಬೂಲ್‌ (ಎಎಫ್‌ಪಿ): ಆಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಉಗ್ರ ಸಂಘಟನೆ ಮಂಗಳವಾರ ಅಟ್ಟಹಾಸ ಮೆರೆದಿದೆ. ಸೆಂಟ್ರಲ್ ಕಾಬೂಲ್‌ನಲ್ಲಿ ನಡೆಸಿದ ಭೀಕರ ಆತ್ಮಹತ್ಯಾ ದಾಳಿಯಲ್ಲಿ ಕನಿಷ್ಠ 28 ಜನರು ಮೃತಪಟ್ಟಿದ್ದಾರೆ.
ಘಟನೆಯಲ್ಲಿ 327 ಜನರು ಗಾಯಗೊಂಡಿದ್ದಾರೆ. ‘ಗಾಯಾಳುಗಳ ಪೈಕಿ ಹಲವರ ಸ್ಥಿತಿ ಗಂಭೀರವಾಗಿದೆ’ ಎಂದು ಆಫ್ಘಾನ್‌ ಆರೋಗ್ಯ ಸಚಿವಾಲಯದ ವಕ್ತಾರ ಮೊಹಮ್ಮದ್ ಇಸ್ಲಾಯಿಲ್ ಕವೂಸಿ ಅವರು ತಿಳಿಸಿದ್ದಾರೆ.
ರಾಜಧಾನಿ ನಗರ ಕಾಬೂಲ್‌ನ ಪುಲಿ ಮೊಹಮ್ಮದ್ ಖಾನ್ ಪ್ರದೇಶದಲ್ಲಿರುವ ಗುಪ್ತಚರ ಪಡೆಯ ಕಚೇರಿ ಸಮೀಪ ಈ ಘಟನೆ ನಡೆದಿದ್ದು, ದಟ್ಟ ಹೊಗೆ ಮುಗಿಲೆತ್ತರ ಆವರಿಸಿತ್ತು. ಹಲವು ಕಿಲೋ ಮೀಟರ್ ದೂರದ ಕಟ್ಟಡಗಳ ಕಿಟಕಿಗಳಿಗೂ ಹೊಗೆ ಹಬ್ಬಿತ್ತು. ಇನ್ನು, ದಾಳಿಯ ಹೊಣೆಯನ್ನು ತಾಲಿಬಾನ್ ಹೊತ್ತುಕೊಂಡಿದೆ.
‘ಒಬ್ಬ ಆತ್ಮಹತ್ಯಾ ದಾಳಿಕೋರ ಕಾರಿನಲ್ಲಿ ಸ್ಫೋಟಿಸಿಕೊಂಡಿದ್ದಾನೆ. ಇನ್ನೂ ಒಂದಿಬ್ಬರು ಅಡಗಿರುವ ಶಂಕೆ ಇದೆ’ ಎಂದು ಆಫ್ಘಾನಿಸ್ತಾನ ಆಂತರಿಕ ಸಚಿವಾಲಯದ ವಕ್ತಾರ ಸಾದೀಕ್ ಸಿದ್ದಿಕಿ ತಿಳಿಸಿದ್ದಾರೆ.

Write A Comment