ಅಂತರಾಷ್ಟ್ರೀಯ

ದಕ್ಷಿಣ ಅಮೆರಿಕದ ಈಕ್ವೆಡಾರ್‌ನಲ್ಲಿ ಭೂಕಂಪ : 300 ದಾಟಿದ ಸಾವಿನ ಸಂಖ್ಯೆ

Pinterest LinkedIn Tumblr

eqಪೋರ್ಟೊವಿಜೊ (ಈಕ್ವೆಡಾರ್), ಏ.18- ದಕ್ಷಿಣ ಅಮೆರಿಕದ ಈಕ್ವೆಡಾರ್‌ನಲ್ಲಿ ಶನಿವಾರ ರಾತ್ರಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಸತ್ತವರ ಸಂಖ್ಯೆ 300 ದಾಟಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಲಿದೆ ಎಂದು ಪರಿಹಾರ ಕಾರ್ಯಾಚರಣೆ ಉಸ್ತುವಾರಿ ಅಧಿಕಾರಿಗಳು ತಿಳಿಸಿದ್ದಾರೆ.

7.8ರ ತೀವ್ರತೆಯ ಭೂಕಂಪನದಲ್ಲಿ ಎರಡು ಸಾವಿರ ಜನ ಗಾಯಗೊಂಡಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಸಾವಿರಾರು ಮಂದಿ ನಿರಾಶ್ರಿತರಾಗಿದ್ದು, ಅವರಿಗೆಲ್ಲ ರಕ್ಷಣೆ, ಆಹಾರ, ಔಷಧ, ಬಟ್ಟೆ, ಕುಡಿಯುವ ನೀರು ಒದಗಿಸುವುದು ಭಾರೀ ಸವಾಲಾಗಿದೆ.

ಅವಶೇಷಗಳಡಿ ಇನ್ನೂ ಬಹಳ ಜನ ಸಿಲುಕಿರುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.

Write A Comment