ಅಂತರಾಷ್ಟ್ರೀಯ

ಚೀನಾ ಜತೆ ಅಜರ್ ವಿಷಯ ಚರ್ಚಿಸಿದ ಸುಷ್ಮಾ; ತ್ರಿಪಕ್ಷೀಯ ಮಾತುಕತೆಗಾಗಿ ರಷ್ಯಾ ಪ್ರವಾಸದಲ್ಲಿರುವ ವಿದೇಶಾಂಗ ಸಚಿವೆ

Pinterest LinkedIn Tumblr

sushmaಮಾಸ್ಕೊ (ಪಿಟಿಐ): ಪಠಾಣ್‌ಕೋಟ್ ದಾಳಿ ಸಂಚುಕೋರ ಮಸೂದ್ ಅಜರ್‌ನನ್ನು ‘ಉಗ್ರ’ ಎಂದು ವಿಶ್ವಸಂಸ್ಥೆ ಘೋಷಿಸಿಲು ಅಡ್ಡಿಪಡಿಸುತ್ತಿರುವ ಕುರಿತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಸೋಮವಾರ ಚೀನಾ ಜತೆಗೆ ಚರ್ಚಿಸಿದ್ದಾರೆ.
ರಷ್ಯಾ –ಭಾರತ–ಚೀನಾ ವಿದೇಶಾಂಗ ಸಚಿವರ ತ್ರಿಪಕ್ಷೀಯ ಮಾತುಕತೆಗಾಗಿ ರಷ್ಯಾ ಪ್ರವಾಸದಲ್ಲಿರುವ ಸುಷ್ಮಾ, ಅಜರ್ ವಿಷಯವಾಗಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯೀ ಅವರೊಟ್ಟಿಗೆ ಚರ್ಚಿಸಿದ್ದಾರೆ.
ಇದೇ ವೇಳೆ, ಹಲವು ವಿಷಯಗಳ ಕುರಿತೂ ಸುಷ್ಮಾ ಅವರು ಚರ್ಚಿಸಿದ್ದಾರೆ ಎಂದು ವಿಶ್ವಸನೀಯ ಮೂಲಗಳು ಹೇಳಿವೆ.
ಜೈಷ್‌–ಎ–ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥನೂ ಆಗಿರುವ ಅಜರ್‌ನನ್ನು ವಿಶ್ವಸಂಸ್ಥೆಯು ಉಗ್ರರ ಪಟ್ಟಿಯಲ್ಲಿ ಸೇರಿಸಬೇಕೆಂಬ ಭಾರತದ ಮನವಿಗೆ ಚೀನಾ ತೊಡರುಗಾಲು ಹಾಕುತ್ತಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನ ಹೊಂದಿರುವ ಚೀನಾ, ತನ್ನ ನಡೆಗೆ ತಾಂತ್ರಿಕ ಕಾರಣಗಳನ್ನು ಮುಂದೊಡ್ಡುತ್ತಿದೆ.

Write A Comment