ಅಂತರಾಷ್ಟ್ರೀಯ

ದಕ್ಷಿಣ ಸುಡಾನ್‌ನಲ್ಲಿ ಮಾರಣಹೋಮ: 140 ಮಂದಿ ಹತ್ಯೆಗೈದ ಆಕ್ರಮಣಕಾರರು

Pinterest LinkedIn Tumblr

Ethiopia-forceಇಥಿಯೋಪಿಯ: ದಕ್ಷಿಣ ಸುಡಾನ್ ನ ಇಥಿಯೋಪಿಯ ಗಡಿ ಪ್ರದೇಶದಲ್ಲಿರುವವರ ಮೇಲೆ ಬಂದೂಕುಧಾರಿಗಳು ಮನಬಂದಂತೆ ಗುಂಡು ಹಾರಿಸಿ 140ಕ್ಕೂ ಅಧಿಕ ಜನರನ್ನು ಬಲಿ ಪಡೆದಿದ್ದಾರೆ.
ಬಂದೂಕುದಾರಿಗಳು ನಡೆಸಿದ ಮಾರಣಹೋಮಕ್ಕೆ ಮಕ್ಕಳ ಮಹಿಳೆಯರು ಸೇರಿದಂತೆ 140ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಹಲವರನ್ನು ಅಪಹರಿಸಿದ್ದಾರೆ ಎಂದು ಇಥಿಯೋಪಿಯ ಸರ್ಕಾರ ಹೇಳಿದೆ.
ಇನ್ನು ಅಕ್ರಮಣಕಾರರ ವಿರುದ್ಧ ಕಾರ್ಯಾಚರಣೆ ನಡೆಸಿದ ಇಥಿಯೋಪಿಯ ಸೇನೆ ಸುಮಾರು 60 ಮಂದಿಯನ್ನು ಹತ್ಯೆಗೈದಿದ್ದಾರೆ.
ಬುಡಕಟ್ಟು ಸಮುದಾಯಕ್ಕೆ ಸೇರಿದ ಎತಹ್ನಿಕ್ ಮರ್ಲೆ ಸಂಘಟನೆಯು ಗಂಬೆಲ್ಲಾ ಎಂಬ ಪ್ರದೇಶದಲ್ಲಿ ಅಮಾಯಕ ಜನರ ಮೇಲೆ ದಾಳಿ ನಡೆಸಿದೆ. ಮೊದಲು ಜಾನುವಾರುಗಳನ್ನು ಅಪಹರಿಸಲು ದಾಳಿಯಿಡುತ್ತಿದ್ದ ಇವರು ಇದೇ ಮೊದಲ ಬಾರಿಗೆ ಜನರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಇಥಿಯೋಪಿಯ ವಿದೇಶಾಂಗ ಸಚಿವಾಲಯದ ವಕ್ತಾರ ತೆವೋಲ್ದೇ ಮುಲುತೇಗ್ ಹೇಳಿದ್ದಾರೆ.

Write A Comment