ಅಂತರಾಷ್ಟ್ರೀಯ

ವಿಶ್ವಸಂಸ್ಥೆಯಲ್ಲಿ ಅಂಬೇಡ್ಕರ್ ಜನ್ಮ ದಿನ ಆಚರಣೆ

Pinterest LinkedIn Tumblr

amವಿಶ್ವಸಂಸ್ಥೆ: ಅಂಬೇಡ್ಕರ್ ಅವರ 125ನೇ ಜನ್ಮ ದಿನಾಚರಣೆಯ ಅಂಗವಾಗಿ ವಿಶ್ವಸಂಸ್ಥೆಯಲ್ಲಿ ಇದೇ ಪ್ರಥಮ ಬಾರಿಗೆ ಅಂಬೇಡ್ಕರ್ ಅವರ ಜನ್ಮ ದಿನವನ್ನು ಆಚರಿಸಲಾಯಿತು.

ವಿಶ್ವಸಂಸ್ಥೆಯಲ್ಲಿ ಭಾರತದ ಸಂಸದೀಯ ನಿಯೋಗವು ಜನ್ಮದಿನಾಚರಣೆ ಸಮಾರಂಭವನ್ನು ಆಯೋಜಿಸಿತ್ತು.

ವಿಶ್ವಸಂಸ್ಥೆಯ ‘ಯುನೈಟೆಡ್ ನೇಷನ್ಸ್ ಡೆವಲಪ್​ವೆುಂಟ್ ಪ್ರೋಗ್ರಾಮ್ ಅಂಗ ಸಂಸ್ಥೆಯಲ್ಲಿ ಅಂಬೇಡ್ಕರ್ ಅವರ ಜನ್ಮ ದಿನವನ್ನು ಆಚರಿಸಲಾಯಿತು. ಇದೊಂದು ಮಹತ್ವದ ಬೆಳವಣಿಗೆಯಾಗಿದ್ದು, ಭಾರತದೊಂದಿಗೆ ಉತ್ತಮ ಬಾಂಧವ್ಯ ವೃದ್ಧಿಸಲು ನೆರವಾಗಲಿದೆ. ವಿಶ್ವಸಂಸ್ಥೆ ವಿಷನ್ 2030 ಯೋಜನೆಯನ್ನು ಭಾರತದಲ್ಲಿ ಜಾರಿಗೊಳಿಸಲು ಬದ್ಧವಾಗಿದೆ. ಬಡವರು ಮತ್ತು ಅಶಕ್ತರಿಗೆ ನೆರವು ನೀಡುವ ಅಂಬೇಡ್ಕರ್ ಅವರ ಆಶಯವನ್ನು ವಿಶ್ವದಾದ್ಯಂತ ಸಾಕರಗೊಳಿಸಲು ವಿಶ್ವಸಂಸ್ಥೆ ಬದ್ಧವಾಗಿದೆ ಎಂದು ಯುಎನ್​ಡಿಪಿಯ ಕಾರ್ಯನಿರ್ವಾಹಕ ಅಧಿಕಾರಿ ಹೆಲೆನ್ ಕ್ಲಾರ್ಕ್ ತಿಳಿಸಿದರು.

Write A Comment