ಅಂತರಾಷ್ಟ್ರೀಯ

ಮೇಕ್ ಇನ್ ಇಂಡಿಯಾ ಪಾಲುದಾರಿಕೆ ಬಗ್ಗೆ ಬ್ರಿಟನ್ ಪ್ರಧಾನಿ ಕೆಮೆರೋನ್ ಸಹಮತ

Pinterest LinkedIn Tumblr

makeವಾಷಿಂಗ್ಟನ್, ಏ.2- ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿ ಪಾಲುದಾರರಾಗಲು ಬ್ರಿಟನ್ ಪ್ರಧಾನಿ ಡೇವಿಡ್ ಕೆಮೆರೋನ್ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಅಣ್ವಸ್ತ್ರ ಭದ್ರತೆ ಶೃಂಗಸಭೆಯ ನಂತರ ತಾವು ಕೆಮೆರೋನ್ ಅವರನ್ನು ಭೇಟಿಯಾಗಿದ್ದು , ಅವರು ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮೇಕ್ ಇಂಡಿಯಾ ಯೋಜನೆಯಲ್ಲಿ ಪಾಲುದಾರರಾಗಲು ನಮ್ಮ ಸಹಮತವಿದೆ ಎಂದಿದ್ದಾರೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಎರಡು ದಿನಗಳ ವಾಷಿಂಗ್ಟನ್ ಭೇಟಿ ಮುಗಿಸಿ ಸೌದಿಗೆ ಪ್ರಯಾಣ ಬೆಳೆಸುವ ಮುನ್ನ ಬ್ರಿಟನ್ ಪ್ರಧಾನಿ ಭೇಟಿ ಕುರಿತಂತೆ ಮೋದಿ ಟ್ವಿಟ್ ಮಾಡಿದ್ದಾರೆ.

ಕಳೆದ ವರ್ಷ ಲಂಡನ್ ಭೇಟಿ ಸಂದರ್ಭದಲ್ಲಿ ಉಭಯ ರಾಷ್ಟ್ರಗಳ ನಡುವೆ 9 ಮಿಲಿಯನ್ ಪೌಂಡ್ ವ್ಯಾಪಾರ ವಹಿವಾಟಿನ ಒಡಂಬಡಿಕೆಯಾಗಿದ್ದು , ಈ ಒಪ್ಪಂದ ಎರಡು ರಾಷ್ಟ್ರಗಳ ನಡುವಿನ ಉತ್ತಮ ಬಾಂಧವ್ಯಕ್ಕೆ ಮುನ್ನುಡಿ ಬರೆದಿದ್ದಾರೆ ಎಂದಿದ್ದಾರೆ ಮೋದಿ. ಮೋದಿ ಮತ್ತು ಕೆಮೊರೋನ್ ಭೇಟಿ ಸಂದರ್ಭದಲ್ಲಿ ವೀಸಾ ವಿಷಯ ಕುರಿತಂತೆಯೂ ಪ್ರಸ್ತಾಪವಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ತಿಳಿಸಿದ್ದಾರೆ.

Write A Comment