ಅಂತರಾಷ್ಟ್ರೀಯ

ಪ್ಯಾರಿಸ್ ಸ್ಫೋಟ ರೂವಾರಿ ಅಬ್ದೇಸ್ಲಾಮ್‌ನನ್ನು ಫ್ರಾನ್ಸ್ ವಶಕ್ಕೆ ನೀಡಲು ಬೆಲ್ಜಿಯಂ ಸಮ್ಮತಿ

Pinterest LinkedIn Tumblr

asಬ್ರುಸೆಲ್ಸ್, ಏ.1- ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್ ಸ್ಫೋಟದ ಪ್ರಮುಖ ಆರೋಪಿ ಸಲಾಹ್ ಅಬ್ದೇಸ್ಲಾಮ್‌ನನ್ನು ಫ್ರಾನ್ಸ್ ಸರ್ಕಾರಕ್ಕೊಪ್ಪಿಸುವ ಪ್ರಸ್ತಾವನೆಗೆ ಬೆಲ್ಜಿಯಂ ಒಪ್ಪಿಗೆ ನೀಡದೆ. ಬೆಲ್ಜಿಯಂ ವಿಮಾನ ನಿಲ್ದಾಣವನ್ನು ಪುನರಾರಂಭಿಸಲು ನಾವು ಸಿದ್ಧರಿದ್ದೇವೆ.

ಆದರೆ ಯಾವುದೇ ವಿಮಾನಗಳೂ ಇಲ್ಲಿಂದ ಇನ್ನೂ ಸಂಚಾರ ಆರಂಭಿಸುತ್ತಿಲ್ಲ ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ನವೆಂಬರ್‌ನಲ್ಲಿ ಪ್ಯಾರಿಸ್‌ನ ಕ್ರೀಡಾಂಗಣದಲ್ಲಿ ನಡೆದ ಸ್ಪೋಟದಲ್ಲಿ 130 ಜನರು ಸಾವನ್ನಪ್ಪಿ 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ವಿಧ್ವಂಸಕ ಕೃತ್ಯ ಎಸಗಿದ ಪಾತಕಿಗಳ ಪೈಕಿ ಈಗ ಅಬ್ದೇಸ್ಲಾಮ್ ಒಬ್ಬನೇ ಜೀವಂತ ಸಾಕ್ಷಿಯಾಗಿದ್ದಾನೆ.

ಫ್ರಾನ್ಸ್ ಈ ಮೊದಲು ಅಬ್ದೇಸ್ಲಾಮ್‌ನನ್ನು ಗಡಿಪಾರು ಮಾಡುವಂತೆ ಬೆಲ್ಜಿಯಂ ಸರ್ಕಾರವನ್ನು ಕೇಳಿತ್ತು.

Write A Comment