ಅಂತರಾಷ್ಟ್ರೀಯ

ಈಜಿಪ್ಟ್‌ಏರ್ ಹೈಜಾಕ್ ಮಾಡಿದವನೊಂದಿಗೆ ಸೆಲ್ಫಿ ಕ್ಲಿಕ್ಕಿಸಿದ ಅಪಹೃತ ! ಸಾಮಾಜಿಕ ತಾಣದಲ್ಲಿ ಈ ಸೆಲ್ಫಿ ವೈರಲ್

Pinterest LinkedIn Tumblr

hijacker_selfie

ಲಂಡನ್: ಮಂಗಳವಾರ ಸೈಪ್ರಸ್ ನಲ್ಲಿ ಈಜಿಪ್ಟ್‌ಏರ್ ವಿಮಾನವನ್ನು ಅಪಹರಣ ಮಾಡಿದ ವ್ಯಕ್ತಿಯೊಂದಿಗೆ ಅಪಹೃತನೊಬ್ಬ ಕ್ಲಿಕ್ಕಿಸಿದ ಸೆಲ್ಫಿ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.

ಸೈಫ್ ಈದಿನ್ ಮುಸ್ತಾಫಾ ಎಂಬಾತ ಮಂಗಳವಾರ 56 ಪ್ರಯಾಣಿಕರಿರುವ ಈಜಿಪ್ಟ್‌ಏರ್ ಎಂಎಸ್ 181 ವಿಮಾನವನ್ನು ಅಪಹರಣ ಮಾಡಿದ್ದನು.

ಈ ವೇಳೆ ಆ ವಿಮಾನದಲ್ಲಿದ್ದ ಅಪಹೃತ ಬ್ರಿಟಿಷ್ ಪ್ರಜೆ ಬೆಂಜಮಿನ್ ಇನ್ಸ್ ಎಂಬಾತ ಮುಸ್ತಾಫಾ ಜತೆ ಸೆಲ್ಫಿ ಕ್ಲಿಕ್ಕಿಸಿದ್ದಾನೆ.

ತಮ್ಮ ಮಾಜಿ ಪತ್ನಿಯನ್ನು ಭೇಟಿಯಾಗುವುದಕ್ಕಾಗಿ ಮುಸ್ತಾಫಾ ವಿಮಾನವನ್ನೇ ಅಪಹರಣ ಮಾಡಿದ್ದು, ಕೆಲವು ಗಂಟೆಗಳ ಕಾಲ ಪ್ರಯಾಣಿಕರನ್ನು ಒತ್ತೆಯಾಳುಗಳನ್ನಾಗಿ ಮಾಡಿ ಡ್ರಾಮಾ ಸೃಷ್ಟಿಸಿದ್ದನು. ಈ ವೇಳೆ ಆತನೊಂದಿಗೆ ಸೆಲ್ಫಿ ಕ್ಲಿಕ್ಕಿಸಿದ ಬೆಂಜಮಿನ್, ಆ ಫೋಟೋವನ್ನು ತನ್ನ ಸ್ನೇಹಿತರಿಗೆ ಕಳಹಿಸಿಕೊಟ್ಟಿದ್ದಾರೆ. ಈ ಫೋಟೋ ಈಗ ಟ್ವಿಟರ್‌ನಲ್ಲಿ ಹರಿದಾಡಿದ್ದು ನೆಟಿಜನ್‌ಗಳು ಇದನ್ನು ಡೇರಿಂಗ್ ಸೆಲ್ಫಿ ಎಂದು ಕರೆದಿದ್ದಾರೆ.

Write A Comment