ಅಂತರಾಷ್ಟ್ರೀಯ

ಈಜಿಪ್ಟ್ ವಿಮಾನ ಹೈಜಾಕ್ ಮಾಡಿದ್ದ ವ್ಯಕ್ತಿ ಬಂಧನ; ದೀರ್ಘಾವಧಿ ನಾಟಕದ ಬಳಿಕ ಬಿಡುಗಡೆಗೊಂಡ ವಿಮಾನದ ಸಿಬ್ಬಂದಿಗಳು

Pinterest LinkedIn Tumblr

3

ಕೈರೋ: ಈಜಿಪ್ಟ್ ಏರ್ ವಿಮಾನವನ್ನು ಹೈಜಾಕ್ ಮಾಡಿ ಭಾರೀ ತಲೆನೋವುಂಟು ಮಾಡಿದ್ದ ವ್ಯಕ್ತಿಯನ್ನು ಸೈಪ್ರಸ್ ನಲ್ಲಿ ಬಂಧನಕ್ಕೊಳಪಡಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.

ಈ ಕುರಿತಂತೆ ಸೈಪ್ರಸ್ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದ್ದು, ಸೈಪ್ರಸ್ ನಲ್ಲಿ ಈಜಿಪ್ಟ್ ಏರ್ ವಿಮಾನವನ್ನು ಹೈಜಾಕ್ ಮಾಡಿದ್ದ ವ್ಯಕ್ತಿಯನ್ನು ಇದೀಗ ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದು, ದೀರ್ಘಾವಧಿಯ ನಾಯಕ ಮುಕ್ತಾಯಗೊಂಡಿದೆ. ಇದರಂತೆ ಪ್ರಯಾಣಿಕರ ಬಿಡುಗಡೆ ನಂತರ ವಿಮಾನ ಸಿಬ್ಬಂದಿಗಳು ಬಿಡುಗಡೆಗೊಂಡಿದ್ದಾರೆ ಎಂದು ಹೇಳಿದೆ.

ಅಲೆಕ್ಸಾಂಡ್ರಿಯಾದಿಂದ ಕೈರೋಗೆ ಹೋಗಿದ್ದ ಎಂಎಸ್ 181 ಏರ್‌ಬಸ್ ವಿಮಾನವನ್ನು ಅಪಹರಣಗೈದ ಸೈಫಿದೀನ್ ಮುಸ್ತಾಫಾ ಎಂಬ ವ್ಯಕ್ತಿ ಅದನ್ನು ಸೈಪ್ರಸ್‌ನ ಲರ್ಕಾನೋ ವಿಮಾನ ನಿಲ್ದಾಣದಲ್ಲಿ ಇಳಿಸಿದ್ದನು. ವಿಮಾನದಲ್ಲಿ ಬಾಂಬ್ ಇಟ್ಟಿದ್ದೇನೆ, ಅದನ್ನೀಗ ಸ್ಫೋಟ ಮಾಡುತ್ತೇನೆ ಎಂದು ಬೆದರಿಕೆಯೊಡ್ಡಿ ಈತ ವಿಮಾನ ಅಪಹರಣ ಮಾಡಿದ್ದನು. ಇದೀಗ ವಿಮಾನ ಹೈಜಾಕ್ ಮಾಡಿದ್ದವನನ್ನು ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

Write A Comment