ಅಂತರಾಷ್ಟ್ರೀಯ

ಈಜಿಪ್ಟ್ ಸೇನಾ ದಾಳಿಗೆ 19 ಮಂದಿ ಉಗ್ರರು ಬಲಿ

Pinterest LinkedIn Tumblr

bsf-soldiers-patrol-e1457186619632ಈಜಿಪ್ಟ್: ಇಲ್ಲಿನ ಉತ್ತರ ಭಾಗದಲ್ಲಿ ದಾಳಿ ನಡೆಸಿದ ಸೇನಾ ಪಡೆ 19 ಉಗ್ರರನ್ನು ಹೊಡೆದುರುಳಿಸಿದ್ದಾರೆ. ಈ ಮೂಲಕ ಇಲ್ಲಿಯವರೆಗೆ ನಡೆದ ದಾಳಿಯಲ್ಲಿ ಒಟ್ಟು 60 ಜನ ಉಗ್ರರು ಮೃತಪಟ್ಟಿದ್ದಾರೆ.

ಸೇನಾ ಪಡೆ ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಒಂಬತ್ತು ಮಂದಿ ಹತರಾದರೆ. ಈಜಿಪ್ಟ್ ಸೇನಾ ಪಡೆ ನಡೆಸಿದ ವಾಯು ದಾಳಿಯಲ್ಲಿ ಹತ್ತು ಉಗ್ರರು ಮೃತಪಟ್ಟಿದ್ದಾರೆ ಎಂದು ಸೇನಾ ಮೂಲಗಳು ಮಾಹಿತಿ ನೀಡಿದೆ.

ಈ ನಡುವೆ 6 ಜನ ಶಂಕಿತ ಉಗ್ರರನ್ನು ಸೇನಾಪಡೆ ಜೀವಂತವಾಗಿ ಸೆರೆ ಹಿಡಿದ್ದಿದ್ದಾರೆ. ಉಗ್ರರು ಅಡಗಿ ಕುಳಿತ್ತಿದ್ದ ಪ್ರದೇಶಗಳಿಗೆ ದಾಳಿ ನಡೆಸಿದ ಸೇನಾಪಡೆ 23 ಶೆಡ್‌ಗಳು, 27 ಪರವಾನಗಿ ರಹಿತ ವಾಹನಗಳು ಹಾಗೂ ಎರಡು ಬೈಕ್‌ಗಳನ್ನು ನಾಶಪಡಿಸಿದ್ದಾರೆ.

Write A Comment