ರಾಷ್ಟ್ರೀಯ

ಸೋಮವಾರದಿಂದ ಮುಷ್ಕರ ಹೂಡಲಿವೆ ಐಡಿಬಿಐ ಬ್ಯಾಂಕ್ ಸಂಘಟನೆಗಳು

Pinterest LinkedIn Tumblr

idbi-bankಮುಂಬೈ: ಕೇಂದ್ರ ಸರ್ಕಾರದ ನೀತಿಯನ್ನು ವಿರೋಧಿಸಿ ಐಡಿಬಿಐ ನೌಕರರು ಸೋಮವಾರ (29 ಮಾರ್ಚ್ 2016) ದಿಂದ ಮುಷ್ಕರ ಆರಂಭಿಸಲಿದ್ದಾರೆ.
ಐಡಿಬಿಐ ಆಫೀಸರ್ ಮತ್ತು ನೌಕರರ ಒಕ್ಕೂಟವು ಮಾರ್ಚ್ 28 ರಂದು ಒಂದು ದಿನಗಳ ಮುಷ್ಕರ ನಡೆಸಲಿದ್ದು, ಐಡಿಬಿಐ ಬ್ಯಾಂಕ್ ಯೂನಿಯನ್‌ನ ಒಕ್ಕೂಟವು ಸೋಮವಾರದಿಂದ ಮಾರ್ಚ್ 31ರ ವರೆಗೆ ಮುಷ್ಕರ ಹೂಡಲಿದೆ.
ಈ ತಿಂಗಳಲ್ಲಿ ಈ ಎರಡೂ ಸಂಘಟನೆಗಳು ಮುಂಬೈ ಲೇಬರ್ ಕಮಿಷನರ್ ಜತೆ ಸಭೆ ನಡೆಸಿದ್ದರೂ, ಸಭೆ ಫಲಪ್ರದವಾಗಲಿಲ್ಲ.
ಪ್ರಸ್ತುತ ಬ್ಯಾಂಕ್‌ನಲ್ಲಿ 17,500 ಮಂದಿ ನೌಕರರಿದ್ದಾರೆ. ಕರ್ನಾಟಕ ಹೊರತುಪಡಿಸಿ ಇನ್ನಿಳಿದ ರಾಜ್ಯಗಳಲ್ಲಿ ಈ ಮುಷ್ಕರ ನಡೆಯಲಿದೆ.

Write A Comment