ಅಂತರಾಷ್ಟ್ರೀಯ

ಸಹೋದರತ್ವದ ಸಂದೇಶ ಸಾರಿ ಮುಸ್ಲಿಂ, ಹಿಂದೂಗಳ ಪಾದ ಪೂಜೆ ಮಾಡಿದ ಪೋಪ್ ಫ್ರಾನ್ಸಿಸ್

Pinterest LinkedIn Tumblr

Pope

ಕಾಸ್ಟಿಲಿನೋವೋ ಡಿ ಪೋರ್ಟೋ, ಇಟೆಲಿ: ಪೋಪ್ ಫ್ರಾನ್ಸಿಸ್ ಗುರುವಾರ ಮುಸ್ಲಿಂ, ಹಿಂದೂ, ಸಂಪ್ರದಾಯವಾದಿ ಹಾಗೂ ಕ್ಯಾಥೋಲಿಕ್ ವಲಸೆಗಾರರ ಪಾದ ತೊಳೆದು, ಪಾದಕ್ಕೆ ಮುತ್ತಿಟ್ಟು ಸಹೋದರತ್ವದ ಸಂದೇಶ ಸಾರಿದ್ದಾರೆ.

ಬ್ರುಸೆಲ್ಸ್ ದಾಳಿಯ ಹಿನ್ನೆಲೆಯಲ್ಲಿ ಮುಸ್ಲಿಂ ವಿರೋಧಿ, ವಲಸೆಗಾರರ ವಿರೋಧಿ ಎಂದು ಜನರು ಹೊಡೆದಾಡಿಕೊಂಡಿರುವಾಗ ನಾವೆಲ್ಲರೂ ಒಂದೇ ದೇವರ ಮಕ್ಕಳು ಎಂದು ಪೋಪ್ ಜಗತ್ತಿಗೆ ಭ್ರಾತೃತ್ವದ ಸಂದೇಶವನ್ನು ನೀಡಿದ್ದಾರೆ.

ಕಾಸ್ಟಿಲಿನೋವೋ ಡಿ ಪೋರ್ಟೋ ದಲ್ಲಿ ಈಸ್ಟರ್ ವೀಕ್ ಮಾಸ್ ನಡೆಯುತ್ತಿದ್ದು, ವಲಸೆಗಾರರರಿಗೆ ಅಭಯ ನೀಡಲಾಗಿದೆ.

ಪವಿತ್ರ ಗುರುವಾರದ ವಿಶೇಷ ಪ್ರಾರ್ಥನೆಯ ಅಂಗವಾಗಿ ಪೋಪ್ ಅನ್ಯ ಧರ್ಮೀಯರ ಪಾದ ಪೂಜೆ ಮಾಡಿದ್ದಾರೆ. ಅದೇ ವೇಳೆ ಬ್ರುಸೆಲ್ಸ್ ದಾಳಿಯನ್ನು ಖಂಡಿಸಿದ ಅವರು ದಾಳಿಕೋರರು ಮಾನವೀಯತೆಯ ಸಹೋದರತ್ವವನ್ನು ನಾಶ ಮಾಡಲು ಯತ್ನಿಸುತ್ತಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ನಾವು ಬೇರೆ ಬೇರೆ ಸಂಸ್ಕೃತಿ ಮತ್ತು ಬೇರೆ ಬೇರೆ ಧರ್ಮದವರು. ಆದರೆ ನಾವೆಲ್ಲರೂ ಒಂದೇ ಮತ್ತು ನಾವೆಲ್ಲರೂ ಶಾಂತಿಯಿಂದ ಬಾಳಲು ಬಯಸುತ್ತೇವೆ ಎಂದು ಪೋಪ್ ಹೇಳಿದ್ದಾರೆ.

Write A Comment