ಅಂತರಾಷ್ಟ್ರೀಯ

ಯುರೋಪಿನಲ್ಲಿ ದಾಳಿ ನಡೆಸಲು 400 ಉಗ್ರರಿಗೆ ಐಸಿಸ್ ತರಬೇತಿ

Pinterest LinkedIn Tumblr

isiಪ್ಯಾರಿಸ್: ಯುರೋಪಿನ ಹಲವು ಭಾಗಗಳಲ್ಲಿ ದಾಳಿ ನಡೆಸಲು ಐಸಿಸ್ 400 ಉಗ್ರರಿಗೆ ತರಬೇತಿ ನೀಡಿ, ಯುರೋಪಿಗೆ ಕಳುಹಿಸಿದೆ. ಇವರು ಪ್ಯಾರಿಸ್ ಮತ್ತು ಬ್ರಸ್ಸೆಲ್ಸ್​ನಲ್ಲಿ ನಡೆದ ದಾಳಿಯ ಮಾದರಿಯಲ್ಲೇ ದಾಳಿ ನಡೆಸಲು ಸಿದ್ಧತೆ ನಡೆಸಿದ್ದಾರೆ.

ಸಿರಿಯಾ ಮತ್ತು ಇರಾಕ್​ನಲ್ಲಿ ಉಗ್ರರಿಗೆ ತರಬೇತಿ ನೀಡಲಾಗಿದೆ. ಇಲ್ಲಿ ತರಬೇತಿ ಪಡೆದ ಉಗ್ರರು ಯುರೋಪಿನಾದ್ಯಂತ ನಿರಂತರವಾಗಿ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂಬ ಮಾಹಿತಿ ಯುರೋಪ್ ಮತ್ತು ಇರಾಕ್ ಗುಪ್ತಚರ ಇಲಾಖೆಯ ವರದಿಗಳಿಂದ ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷ ನವೆಂಬರ್ 13 ರಂದು ಪ್ಯಾರಿಸ್​ನಲ್ಲಿ ನಡೆದ ದಾಳಿಯಲ್ಲಿ ಪೊಲೀಸರು ಒಬ್ಬ ಉಗ್ರನನ್ನು ಹೊಡೆದುರುಳಿಸಿದ್ದರು. ಆತ ಕೊನೇ ಕ್ಷಣದಲ್ಲಿ ಯುರೋಪಿಗೆ ನೂರಾರು ಉಗ್ರರು ಗುಂಪುಗಳಾಗಿ ಆಗಮಿಸಿದ್ದು, ಹಲವೆಡೆ ದಾಳಿ ನಡೆಸಲಿದ್ದಾರೆ. ಅವರು ಯುರೋಪಿನ ಎಲ್ಲಾ ಭಾಗದಲ್ಲೂ ಹರಡಿದ್ದಾರೆ ಎಂದು ತಿಳಿಸಿದ್ದ.

ಬೆಲ್ಜಿಯಂನ ಬ್ರಸ್ಸೆಲ್ಸ್ ದಾಳಿಯಲ್ಲಿ ಪಾಲ್ಗೊಂಡಿದ್ದ ಉಗ್ರನಿಗಾಗಿ ಬೆಲ್ಜಿಯಂ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Write A Comment