ಅಂತರಾಷ್ಟ್ರೀಯ

ಮೋದಿಯನ್ನು ಮಾಂತ್ರಿಕನೆಂದು ವರ್ಣಿಸಿದ ಖುರ್ಷಿದ್‌

Pinterest LinkedIn Tumblr

salವಾಷಿಂಗ್ಟನ್‌ : ಪ್ರಧಾನಿ ನರೇಂದ್ರ ಮೋದಿಯೊಬ್ಬ ಮಾಂತ್ರಿಕ. ಹೀಗಾಗಿ ಈಗಲೂ ಅವರು ಜನಪ್ರಿಯ ನಾಯಕನಾಗಿಯೇ ಮುಂದುವರಿದಿದ್ದಾರೆ ಎಂದು ಹಿರಿಯ ಕಾಂಗ್ರೆಸ್‌ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಸಲ್ಮಾನ್‌ ಖುರ್ಷಿದ್‌ ಹೇಳಿದ್ದಾರೆ.

ಅವರು ಬುಧವಾರ ಜಾರ್ಜ್‌ಟೌನ್‌ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ವಿಶೇಷ ಉಪನ್ಯಾಸ ನೀಡುತ್ತಿದ್ದರು. ಈ ವೇಳೆ ‘ಮೋದಿ ಅವರಿಗೆ ತದ್ವಿರುದ್ಧವಾಗಿ ಅವರ ಭಾರತೀಯ ಜನತಾ ಪಕ್ಷವು ಅತ್ಯಂತ ವೇಗವಾಗಿ ತನ್ನ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದೆ’ ಎಂದು ಎಚ್ಚರಿಸಿದ್ದಾರೆ.

‘ಪ್ರಧಾನಿಯಾಗಿ ಮೋದಿ ಅವರ ಅಧಿಕಾರಾವಧಿ ಮುಗಿಯಲು ಇನ್ನೂ ಮೂರು ವರ್ಷಗಳಿವೆ. ನಿಜ ಹೇಳಬೇಕೆಂದರೆ ಅವರ ಭಾರತೀಯ ಜನತಾ ಪಕ್ಷವು ಶರವೇಗದಿಂದ ತನ್ನ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದೆ. ಆದರೆ ಬಿಜೆಪಿ ಜನಪ್ರಿಯತೆಯನ್ನು ಕಳೆದುಕೊಂಡ ಪ್ರಮಾಣದಲ್ಲಿ ಮೋದಿ ತಮ್ಮ ವೈಯಕ್ತಿಕ ಜನಪ್ರಿಯತೆಯನ್ನು ಕಳೆದುಕೊಂಡಿಲ್ಲ’ ಎಂದು ಖುರ್ಷಿದ್‌ ಹೇಳಿದರು.

ಬಳಿಕ ತಮ್ಮ ಕಾಂಗ್ರೆಸ್‌ ಪಕ್ಷದ ಭವಿಷ್ಯದ ಬಗ್ಗೆ ಮಾತನಾಡಿದ ಖುರ್ಷಿದ್‌, ಒಂದೊಮ್ಮೆ ಕಾಂಗ್ರೆಸ್‌ ಮರಳಿ ಅಧಿಕಾರಕ್ಕೆ ಬಾರದೆ ಹೋದಲ್ಲಿ ಅದು ನಿಜಕ್ಕೂ ಖೇದದ ಸಂಗತಿ ಎನಿಸುವುದು ಎಂದು ಹೇಳಿದರು.

Write A Comment