ಕೊಲಂಬೊ: ಅಕ್ರಮವಾಗಿ ಗಡಿಯನ್ನು ಪ್ರವೇಶಿಸಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದಡಿ ಶ್ರೀಲಂಕಾ ನೌಕಾಪಡೆ ಮತ್ತೆ ಮೂವರು ಭಾರತೀಯ ಮೀನುಗಾರರನ್ನು ಬಂಧಿಸಿದೆ.
ಜಾಫ್ನಾ ಡೆಲ್ಫ್ಟ್ ಐಲೆಟ್ ವಾಯುವ್ಯ ಪ್ರದೇಶದಲ್ಲಿ ಬುಧವಾರ ರಾತ್ರಿ ಶ್ರೀಲಂಕಾ ನೌಕಾ ಪಡೆಯು ಭಾರತೀಯ ಮೀನುಗಾರರನ್ನು ಬಂಧಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದೆ. ಮೂವರು ಮೀನುಗಾರರ ಜತೆ ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬುವುದಾಗಿ ತಿಳಿದುಬಂದಿದೆ.
ಅಕ್ರಮವಾಗಿ ಗಡಿಯನ್ನು ಪ್ರವೇಶಿಸಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದಡಿ ಶ್ರೀಲಂಕಾವು 28 ಭಾರತೀಯ ಮೀನುಗಾರರನ್ನು ಮಾ.13ರಂದು, ಮಾರ್ಚ್ 3 ರಂದು 8 ಮಂದಿಯನ್ನು, ಮಾರ್ಚ್ 6ರಂದು 4 ಮಂದಿಯನ್ನು ಹಾಗೂ ಮಾರ್ಚ್ 10 ರಂದು ಹಲವು ಮೀನುಗಾರರನ್ನು ಶ್ರೀಲಂಕಾದ ಶ್ರಿಲಂಕಾ ನೌಕಾಪಡೆ ಬಂಧಿಸಿತ್ತು.