ಅಂತರಾಷ್ಟ್ರೀಯ

ಜಗತ್ತಿನ ಬಡ ರಾಷ್ಟ್ರದ ಮಟ್ಟಕ್ಕೆ ಇಳಿದಿದೆ ಅಮೆರಿಕ : ಟ್ರಂಪ್‌

Pinterest LinkedIn Tumblr

trump-e1458218305799ವಾಷಿಂಗ್ಟನ್‌: ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್‌ ಅಭ್ಯರ್ಥಿ ಡೋನಲ್ಡ್‌ ಟ್ರಂಪ್‌ “ದುಬೈ ಹಾಗೂ ಚೀನಾದ ಮೂಲ ಸೌಕರ್ಯಗಳಿಗೆ ಹೋಲಿಸಿದರೆ ಅಮೆರಿಕ ಈಗ ತೃತೀಯ ಜಗತ್ತಿನ ರಾಷ್ಟ್ರವಾಗಿದೆ” ಎಂದು ಹೇಳಿದ್ದಾರೆ.

ಅಮೆರಿಕದ ಸಾಲ್ಟ್ ಲೇಕ್‌ ಸಿಟಿಯಲ್ಲಿ ತನ್ನ ಬೆಂಬಲಿಗರೊಂದಿಗೆ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಟ್ರಂಪ್‌, “ಅಮೆರಿಕವು ಈಗ ವಿಶ್ವದ ತೃತೀಯ ಜಗತ್ತಿನ ರಾಷ್ಟ್ರದಂತಾಗಿದ್ದು, ದುಬೈ ಚೀನಾಕ್ಕೆ ರಾಷ್ಟ್ರಗಳಿಗೆ ಹೋಲಿಸಿದರೇ ರೈಲು, ರಸ್ತೆ, ಬುಲೆಟ್‌ ಟ್ರೈನ್‌ ನಂತಹ ತಂತ್ರಜ್ಞಾನಗಳಲ್ಲಿ ನಾವು ಹಿಂದಿದ್ದೇವೆ” ಎಂದು ಹೇಳಿದ್ದಾರೆ.

ಅಲ್ಲದೇ “ವ್ಯಾಪಾರ, ವಾಣಿಜ್ಯ ವಹಿವಾಟಿಗೆ ಸಂಬಂಧಪಟ್ಟಂತೆ ನಾವು ಬದಲಾಗಬೇಕು. ಏಕೆಂದರೆ ನಮ್ಮದು ಈಗ ಬಡ ರಾಷ್ಟ್ರವಾಗಿದೆ. ನಾವೆಲ್ಲರೂ ಪುನಃ ಅಮೆರಿಕವನ್ನು ಮಹೋನ್ನತ ದೇಶವನ್ನಾಗಿ ಮಾಡಬೇಕಾಗಿದೆ. ತನ್ನ ನಾಯಕತ್ವದಲ್ಲಿ ಅಮೆರಿಕಾವು ಐಸಿಸ್‌ ಉಗ್ರ ಸಂಘಟನೆಯನ್ನು ಸಂಪೂರ್ಣವಾಗಿ ನಾಶ ಮಾಡುವುದಲ್ಲದೆ, ಅಮೆರಿಕವನ್ನು ಸಂಪೂರ್ಣವಾಗಿ ಹೊಸದಾಗಿ ನಿರ್ಮಿಸಲಿದೆ ಎಂದು ಹೇಳಿದರು.

Write A Comment