ಅಂತರಾಷ್ಟ್ರೀಯ

ಉದ್ದಟತನ ಮೆರೆದ ಮಿಸ್ ಪ್ಯುರ್ಟೋ ರಿಕೋ; ಮಿಸ್ ಯುನಿವರ್ಸ್ ಸೌಂದರ್ಯ ಸ್ಪರ್ಧೆಯಿಂದ ಔಟ್

Pinterest LinkedIn Tumblr

Kristhielee Caride

ಪ್ಯುರ್ಟೋ ರಿಕೋ: 2016ರ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಭಾಗವಹಿಸದಂತೆ ಕರೇಬಿಯನ್ ದ್ವೀಪ ಪ್ಯುರ್ಟೋ ರಿಕೋಸೌಂದರ್ಯ ರಾಣಿಗೆ ನಿರ್ಬಂಧ ಹೇರಲಾಗಿದೆ. ಕ್ರಿಸ್ತಿಲೀ ಕಾರಿಡೆ ಎಂಬ ಮಾಡೆಲ್ ನಾಲ್ಕು ತಿಂಗಳ ಹಿಂದೆ ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್ ಪ್ಯುರೆಟೋ ರಿಕೋ ಆಗಿ ಆಯ್ಕೆಯಾಗಿದ್ದು, ಮಿಸ್ ಯುನಿವರ್ಸ್ ಸ್ಪರ್ಧೆಯ ಸ್ಪರ್ಧಾಳು ಆಗಿದ್ದಳು.

2016ರಲ್ಲಿ ನಡೆಯಲಿರುವ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಈಕೆ ಭಾಗವಹಿಸಬೇಕಾಗಿತ್ತು. ಆದರೆ ಇತ್ತೀಚಿಗೆ ಮಾಧ್ಯಮವೊಂದು ಸಂದರ್ಶನ ನಡೆಸಲು ಬಂದಾಗ ನನಗೆ ಕ್ಯಾಮೆರಾ ಇಷ್ಟವಿಲ್ಲ ಎಂದು ಹೇಳಿ ಉದ್ದಟತನದಿಂದ ವರ್ತಿಸಿದ್ದಳು. ಕಾರಿಡೆ ಉತ್ತರವನ್ನು ಖಂಡಿಸಿದ ಮಿಸ್ ಯುನಿವರ್ಸ್ ಪ್ಯುರೆಟೋ ರಿಕೋದ ದೇಶೀಯ ನಿರ್ದೇಶಕಿ ಡೇಸಿರೀ ಲೌರೀ ಈಕೆಯನ್ನು ಮಿಸ್ ಯುನಿವರ್ಸ್ ಸ್ಪರ್ಧೆಯಿಂದ ತೆಗೆದು ಹಾಕಿದ್ದಾರೆ.

ಇಷ್ಟೊಂದು ಉದ್ದಟತನ ಮರೆದ ಕ್ಯಾರಿಡೆ ಮಾಧ್ಯಮದವರಲ್ಲಿ ಕ್ಷಮಾಪಣೆಯನ್ನೂ ಮಾಡಿಲ್ಲ. ಇದಾದ ನಂತರ ಆಕೆ ತಾನು ವೈಯಕ್ತಿಕ ಸಮಸ್ಯೆಯಿಂದ ಒದ್ದಾಡುತ್ತಿದ್ದು,

ಉದ್ದೇಶಪೂರ್ವಕ ಹಾಗೆ ಹೇಳಲಿಲ್ಲ ಎಂದಿದ್ದರು. ಇಷ್ಟೇ ಅಲ್ಲದೆ ವೈದ್ಯರನ್ನು ಭೇಟಿಯಾಗುವುದಿದೆ ಎಂದು ಹೇಳಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನು ತಪ್ಪಿಸಿಕೊಳ್ಳುತ್ತಿದ್ದರು ಎಂದು ಲೌರಿ ಹೇಳಿದ್ದಾರೆ. ಆದಾಗ್ಯೂ, ಬದ್ಥತೆ ಇಲ್ಲದೇ ಇರುವ ಮಾಡೆಲ್ ನ್ನು ನಾವು ವಿಶ್ವ ಸುಂದರಿ ಸ್ಪರ್ಧೆಗೆ ಕಳುಹಿಸುವುದಿಲ್ಲ ಎಂದು ಲೌರೀ ಹೇಳಿಕೆ ನೀಡಿದ್ದು, ಕಾರಿಡೆ ಮಿಸ್ ಯುನಿವರ್ಸ್ ಸ್ಪರ್ಧೆಯ ಅ‌ವಕಾಶವನ್ನು ಕಳೆದುಕೊಂಡಿದ್ದಾಳೆ.

Write A Comment