ರಾಷ್ಟ್ರೀಯ

ಅರ್ಥ್ ಅವರ್: ತಾಪಮಾನ ಬದಲಾವಣೆಗೆ ರಾತ್ರಿ 8.30ಕ್ಕೆ ವಿದ್ಯುತ್ ದೀಪ ಆರಿಸಿ

Pinterest LinkedIn Tumblr

earth

ನವದೆಹಲಿ: ವಿಶ್ವ ವನ್ಯಜೀವಿ ನಿಧಿ (ಡಬ್ಲ್ಯೂಡಬ್ಲ್ಯೂಎಫ್) ಆಯೋಜಿಸುವ ‘ಅರ್ಥ್ ಅವರ್’ನಲ್ಲಿ ನಾಗರಿಕರು ಪಾಲ್ಗೊಂಡು ಇಂದು ರಾತ್ರಿ ವಿಶ್ವಾದ್ಯಂತ ಸ್ಥಳೀಯ ಕಾಲಮಾನ 8.30ರಿಂದ 9.30ರವರೆಗೆ ಸಾರ್ವಜನಿಕರು ಸ್ವ ಇಚ್ಛೆಯಿಂದ ವಿದ್ಯುತ್ ದೀಪ ಆರಿಸಬೇಕಿದೆ.

ಅರ್ಥ್ ಅವರ್​ಪರಿಸರ ಸಂರಕ್ಷಣಾ ಕಾರ್ಯಕ್ರಮ ಎನಿಸಿಕೊಂಡಿದೆ. ಬಹಳಷ್ಟು ಜನ ತಿಳಿದುಕೊಂಡಿರುವ ಹಾಗೆ ವಿದ್ಯುತ್ ದೀಪ ಸ್ವಿಚ್​ಆಫ್ ಮಾಡುವ ಮೂಲಕ ಅರ್ಥ್ ಅವರ್ ಆಚರಣೆ ಮಾಡುವುದು ವಿದ್ಯುತ್ ಉಳಿತಾಯ ಮಾಡುವುದಕ್ಕಲ್ಲ. ವಿದ್ಯುತ್ ದೀಪ ಉರಿಸುವುದರಿಂದ ಪರಿಸರದಲ್ಲಿ ಇಂಗಾಲದ ಪ್ರಮಾಣ ಹೆಚ್ಚಳವಾಗುತ್ತದೆ. ಈ ಮೂಲಕ ಪರೋಕ್ಷವಾಗಿ ಭೂಮಿಯ ತಾಪಮಾನ ಹೆಚ್ಚಳವಾಗುತ್ತದೆ. ಇದನ್ನು ತಡೆಗಟ್ಟಿ ಭೂಮಿಯನ್ನು ಸಂರಕ್ಷಿಸಬೇಕು ಎಂಬ ಸಂದೇಶವೇ ಅರ್ಥ್ ಅವರ್ ಆಚರಣೆಯಲ್ಲಿ ಅಡಗಿದೆ.

ಕಳೆದ ಬಾರಿ ಅರ್ಥ್ ಅವರ್ ಆಚರಣೆಯಲ್ಲಿ 172 ರಾಷ್ಟ್ರಗಳ 10.4 ದಶಲಕ್ಷ ಜನ ಭಾಗಿಯಾಗಿದ್ದರು. ಪ್ಯಾರಿಸ್​ನ ಐಫೆಲ್ ಟವರ್, ದುಬೈನ ಬುರ್ಜ್ ಖಲೀಫಾ, ಹಾಂಕಾಂಗ್​ನ ಸ್ಕೈಲೈನ್ ಸೇರಿ ಜಗತ್ತಿನ ಐತಿಹಾಸಿಕ ಕಟ್ಟಡಗಳಲ್ಲಿ ವಿದ್ಯುತ್ ದೀಪಗಳನ್ನು ಆರಿಸಲಾಗಿತ್ತು. ಈ ಬಾರಿ 174 ರಾಷ್ಟ್ರಗಳ ಜನ ಅರ್ಥ್ ಅವರ್​ನಲ್ಲಿ ಭಾಗಿಯಾಗಲಿದ್ದಾರೆ.

Write A Comment