ಅಂತರಾಷ್ಟ್ರೀಯ

ವಿಶ್ವದಲ್ಲಿ ಡೆನ್ಮಾರ್ಕ್ ಮಂದಿ ಅತಿ ಖುಷಿವಂತರು

Pinterest LinkedIn Tumblr

danish-e1458204651983ಡೆನ್ಮಾರ್ಕ್: ಇಡೀ ವಿಶ್ವದಲ್ಲಿ ಅತ್ಯಂತ ಸಂತೋಷದಲ್ಲಿರುವವರೆಂದರೆ ಡೆನ್ಮಾರ್ಕ್ ಜನ ಎಂಬುವುದಾಗಿ ವರ್ಲ್ಡ್ ಹ್ಯಾಪಿನೆಸ್ ವರದಿ ಮಾಡಿದೆ.

ಇದೇ 20ರಂದು ವಿಶ್ವ ಸಂತೋಷ ದಿನವಿದ್ದರ ಪರಿಣಾಮ ವರ್ಲ್ಡ್ ಹ್ಯಾಪಿನೆಸ್ ಸಂಸ್ಥೆ, 156 ದೇಶಗಳ ಮೇಲೆ ನಡೆಸಿದ ಅಧ್ಯಯನದ ಪ್ರಕಾರ ಭೂಮಿ ಮೇಲೆ ಡೆನ್ಮಾರ್ಕ್ ದೇಶ ಅತ್ಯಂತ ಸುಖ ಸಂತೋಷವನ್ನು ಹೊಂದಿರುವ ಜನರನ್ನು ಒಳಗೊಂಡ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ವರದಿಯಲ್ಲಿ ಭಾರತ ದೇಶ 118ನೇ ಸ್ಥಾನ ಗಳಿಸಿದೆ. ಆಫ್ರಿಕಾ ಖಂಡದ ಬುರುಂಡಿ ಜನ ಹೆಚ್ಚು ಅಸಂತೋಷದಿಂದ ಕೂಡಿದ್ದು, ಕೊನೆಯ ಸ್ಥಾನದಲ್ಲಿದೆ. ಡೆನ್ಮಾರ್ಕ್ ನಂತರದಲ್ಲಿ ಸ್ವಿಜರ್ಲೆಂಡ್, ಐರ್ಲೆಂಡ್, ನಾರ್ವೆ, ಫಿನ್ ಲ್ಯಾಂಡ್, ಕೆನಡಾ, ನೆದರ್ಲೆಂಡ್, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ, ಸ್ವೀಡನ್ ದೇಶಗಳು ಟಾಪ್ 10ರಲ್ಲಿದೆ ಎಂದು ವಿಶ್ವಸಂಸ್ಥೆ ಅಧಿಕೃತವಾಗಿ ಪ್ರಕಟಿಸಿದೆ.

ಕಡಿಮೆ ಸಂತೋಷವನ್ನು ಹೊಂದಿರುವ ದೇಶಗಳೆಂದರೆ, ಮಡಗಾಸ್ಕರ್, ಟಾಂಜಾನಿಯಾ, ಲಿಬರಿಯಾ, ಗುನಿಯಾ, ರ್ವಾಂಡಾ, ಬೆನಿನ್, ಅಫ್ಘಾನಿಸ್ತಾನ, ಟೋಗೊ, ಸಿರಿಯಾ, ಬುರುಂಡಿ ಎಂಬುವುದಾಗಿ ವರದಿಯಾಗಿದೆ.

Write A Comment