ಅಂತರಾಷ್ಟ್ರೀಯ

ಟುನಿಷಿಯಾ ಸೇನೆ ಕಾರ್ಯಾಚರಣೆ : 35 ಜಿಹಾದಿಗಳು ಸೇರಿ 55 ಸಾವು

Pinterest LinkedIn Tumblr

tuuಬೆನ್ ಗ್ಯುರ್ಡೆನ್ (ಟುನಿಷಿಯ), ಮಾ.8- ಲಿಬಿಯಾ ಗಡಿ ಪ್ರದೇಶದಲ್ಲಿರುವ ಟುನಿಷಿಯದ ಬೆನ್ ಗ್ಯುರ್ಡೆನ್ ನಗರದಲ್ಲಿ ಜಿಹಾದಿ ಉಗ್ರರು ನಡೆಸಿದ ದಾಳಿಗೆ 10 ಮಂದಿ ಯೋಧರು ಹಾಗೂ 10 ಮಂದಿ ನಾಗರಿಕರು ಬಲಿಯಾಗಿದ್ದಾರೆ.ಇದಕ್ಕೆ ಪ್ರತಿಯಾಗಿ ಮರು ದಾಳಿ ನಡೆಸಿದ ಸೇನಾಪಡೆ ಎಲ್ಲ 35 ಮಂದಿ ಜಿಹಾದಿಗಳನ್ನು ಹತ್ಯೆ ಮಾಡಿದ್ದಾರೆ.

ಜಿಹಾದಿಗಳ ಈ ದಾಳಿ ಮತ್ತು ಅಮಾಯಕ ನಾಗರಿಕರು, ಸೈನಿಕರ ಹತ್ಯೆಯನ್ನು ತೀವ್ರವಾಗಿ ಖಂಡಿಸಿರುವ ಅಧ್ಯಕ್ಷ ಬೆಜಿ ಕೈಡ್ ಎಸ್ಸೆಬ್ಸಿ ಈ ರೀತಿ ಘಟನೆಗಳು ದುರದೃಷ್ಟಕರ ಎಂದಿದ್ದಾರೆ.

ಲಿಬಿಯಾ ಗಡಿಯಲ್ಲಿರುವ ಬೆನ್ ಗ್ಯುರ್ಡೆನ್ ನಗರವನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಜಿಹಾದಿಗಳು ಇಂತಹ ದಾಳಿಗಳನ್ನು ನಡೆಸುತ್ತಿದ್ದಾರೆ ಎಂದು ಎಸ್ಸೆಬ್ಸಿ ಅನುಮಾನ ವ್ಯಕ್ತಪಡಿಸಿದ್ದಾರೆ.

Write A Comment