ಅಂತರಾಷ್ಟ್ರೀಯ

ಮಾತುಕತೆಗೆ ತಾಲಿಬಾನ್ ಉಗ್ರರು ನಕಾರ : ನನಸಾಗದ ಆಫ್ಘನ್ ಶಾಂತಿ ಸ್ಥಾಪಿಸುವ ಕನಸು

Pinterest LinkedIn Tumblr

taliಕಾಬೂಲ್, ಮಾ.6- ಉದ್ದೇಶಿತ ನೇರ ಶಾಂತಿ ಮಾತುಕತೆಯನ್ನು ತಾಲಿಬಾನ್ ಉಗ್ರರು ಸಾರಾಸಗಟಾಗಿ ತಳ್ಳಿ ಹಾಕುವುದರೊಂದಿಗೆ ಕಳೆದ ಒಂದೂವರೆ ದಶಕದಿಂದ ಉಗ್ರರ ದಾಳಿಗೆ ಸಿಲುಕಿ ಜರ್ಝರಿತಗೊಂಡಿರುವ ಆಫ್ಘಾನಿಸ್ಥಾನದಲ್ಲಿ ಶಾಂತಿ ಮರುಸ್ಥಾಪನೆಗೆ ಮುಂದಾಗಿದ್ದ ಸರ್ಕಾರಕ್ಕೆ ತೀವ್ರ ಹಿನ್ನಡೆಯಾದಂತಾಗಿದೆ.

ಆಫ್ಘಾನಿಸ್ಥಾನ ಸರ್ಕಾರದ ಪ್ರತಿನಿಧಿಗಳು ಹಾಗೂ ತಾಲಿಬಾನ್ ಉಗ್ರ ನಾಯಕರ ನಡುವೆ ಇಸ್ಲಮಾಬಾದ್‌ನಲ್ಲಿ ಈ ವಾರದಲ್ಲಿ ಮಹತ್ವದ ಮಾತುಕತೆಗಳು ನಡೆಯುವ ಕಾರ್ಯಕ್ರಮ ನಿಗದಿಯಾಗಿತ್ತು. ಈ ಮಾತುಕತೆಯಲ್ಲಿ ಪಾಕಿಸ್ಥಾನದ ಅಧಿಕಾರಿಗಳೂ ಪಾಲ್ಗೊಂಡು ಆಪ್ಘಾನಿಸ್ಥಾನದಲ್ಲಿ ನಿಯೋಜನೆಗೊಂಡಿರುವ ಹೊರ ರಾಷ್ಟ್ರ ಪಡೆಗಳನ್ನು ಹಿಂದೆ ಕರೆಸಿಕೊಳ್ಳುವ ಬಗ್ಗೆಯೂ ಪ್ರಸ್ತಾಪವಾಗಬೇಕಾಗಿತ್ತು.

ಫೆಬ್ರುವರಿಯಲ್ಲಿ ಕಾಬೂಲ್‌ನಲ್ಲಿ ನಡೆದ ಸಭೆಯಲ್ಲಿ ನಾಲ್ಕು ರಾಷ್ಟ್ರಗಳ ಪ್ರತಿನಿಧಿಗಳು ಕಲೆತು ತಾಲಿಬಾನ್ ಜತೆಗಿನ ಮಾತುಕತೆಗಳು ಈ ವಾರದಲ್ಲಿ ಇಸ್ಲಮಾಬಾದ್‌ನಲ್ಲಿ ನಡೆಯುವ ಬಗ್ಗೆ ಚರ್ಚಿಸಿದ್ದರು.

Write A Comment