ಅಂತರಾಷ್ಟ್ರೀಯ

ಒಂದೇ ತಿಂಗಳಲ್ಲಿ 670 ಇರಾಕಿಗಳ ಹತ್ಯೆ

Pinterest LinkedIn Tumblr

Bagdad-Warಬಾಗ್ದಾದ್: ಯುದ್ಧಪೀಡಿತ ಇರಾಕ್​ನಲ್ಲಿ ಫೆಬ್ರವರಿ ತಿಂಗಳಲ್ಲಿ ಕನಿಷ್ಠ 670 ಮಂದಿ ಸಾವನ್ನಪ್ಪಿದ್ದು, ಇವರಲ್ಲಿ ಮೂರನೇ ಎರಡರಷ್ಟು ಸಾಮಾನ್ಯ ಪ್ರಜೆಗಳಾಗಿದ್ದಾರೆ ಎಂದು ವಿಶ್ವಸಂಸ್ಥೆ ವರದಿ ಮಾಡಿದೆ.

ಇರಾಕ್​ನ ವಿಶ್ವಸಂಸ್ಥೆಯ ಸಹಾಯಕ ಘಟಕ(ಯುಎನ್​ಎಎಂಐ) ನೀಡಿರುವ ವರದಿಯಲ್ಲಿ ಪೊಲೀಸರು, ನಾಗರಿಕ ರಕ್ಷಣಾ ಸಿಬ್ಬಂದಿ ಸೇರಿದಂತೆ 410 ನಾಗರಿಕರನ್ನು ಹತ್ಯೆಗೈಯಲಾಗಿದೆ. ಉಳಿದಂತೆ ಇರಾಕ್​ನ ಖುರ್ದಿಶ್​ನ ಗೆರಿಲ್ಲಾ ಸಿಬ್ಬಂದಿ ಮತ್ತು ಅರೆಸೇನಾ ಪಡೆ ಸೇರಿದಂತೆ ಭದ್ರತಾ ಸಿಬ್ಬಂದಿ ಸತ್ತಿದ್ದಾರೆ.

ಐಸಿಸ್ ವಿರುದ್ಧ ಇರಾಕ್ ಸರ್ಕಾರ ಮತ್ತು ವಿದೇಶಿ ಪಡೆಗಳು ನಡೆಸುತ್ತಿರುವ ಹೋರಾಟದಲ್ಲಿ ಸುಮಾರು 1,290ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಇದರಲ್ಲಿ 1,050 ಮಂದಿ ಪ್ರಜೆಗಳು ಸೇರಿದ್ದಾರೆ. ಒಟ್ಟಾರೆ ಫೆಬ್ರವರಿ ತಿಂಗಳಲ್ಲಿ 849 ಮಂದಿಯ ಹತ್ಯೆಯಾಗಿದ್ದು, 1,450 ಮಂದಿಗೆ ಗಾಯಗಳಾಗಿವೆ.

ಐಸಿಸ್ ಹಿಡಿತದಲ್ಲಿರುವ ಮುಖ್​ದದಿಯಾ ಮತ್ತು ಬಾಗ್ದಾದ್ ಮೇಲೆ ನಡೆಸಿದ 2 ಬೃಹತ್ ಬಾಂಬ್ ಸ್ಪೋಟದಿಂದ ಕನಿಷ್ಠ 110 ಪ್ರಜೆಗಳನ್ನು ಸಾವಿಗೀಡಾಗಿದ್ದಾರೆ ಎಂದು ವರದಿ ಮಾಡಿದೆ. ಐಸಿಸ್ ವಿರುದ್ಧದ ಕಾರ್ಯಾಚರಣೆಯಲ್ಲಿ ಸಾಮಾನ್ಯ ಪ್ರಜೆಗಳ ಹತ್ಯೆ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

Write A Comment