ಅಂತರಾಷ್ಟ್ರೀಯ

ಫೇಸ್‌ಬುಕ್‌ ಸಿಇಒ ಜುಕರ್‌ಬರ್ಗ್’ಗೆ ಇಸಿಸ್‌ನಿಂದ ಬೆದರಿಕೆ ಕರೆ

Pinterest LinkedIn Tumblr

isis-threatಲಂಡನ್: ಭಯೋತ್ಪಾದನಗೆ ಸಂಬಂಧಿಸಿದ ಖಾತೆಗಳನ್ನು ನಿಷ್ಕ್ರಿಯಗೊಳಿಸುತ್ತಿರುವ ಸಾಮಾಜಿಕ ಜಾಲತಾಣಗಳ ವಿರುದ್ಧ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಇರಾನ್ ಉಗ್ರ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದ್ದು, ಫೇಸ್‌ಬುಕ್‌ ಹಾಗೂ ಟ್ವಿಟರ್ ಗಳ ಸಿಇಒಗಳಿಗೆ ಜೀವ ಬೆದರಿಕೆಯನ್ನು ಒಡ್ಡಿರುವುದಾಗಿ ತಿಳಿದುಬಂದಿದೆ.

ಫೇಸ್‌ಬುಕ್‌ ಸಿಇಒ ಮಾರ್ಕ್ ಜುಕರ್‌ಬರ್ಗ್ ಹಾಗೂ ಟ್ವಿಟರ್ ಸಿಇಒ ಜ್ಯಾಕ್ ಡಾರ್ಸೆ ಗೆ ಇಸಿಸ್ ವಿಡಿಯೋ ಮೂಲಕ ನೇರವಾಗಿ ಜೀವಬೆದರಿಕೆ ಒಡ್ಡಿದೆ. . ‘ದಿ ಸನ್ಸ್ ಆ ಫ್ಜ ಖಲಿ ಫ್ಜಟ್ ಆರ್ಮಿ’ ಎಂಬ ಹೆಸರಲ್ಲಿ ಇಸಿಸ್ ವಿಡಿಯೋವನ್ನು ಕಳುಹಿಸಿದ್ದು, ವಿಡಿಯೋ 25 ನಿಮಿಷಗಳ ಕಾಲವಿದೆ. ವಿಡಿಯೋದಲ್ಲಿ ಇಸಿಸ್ ಖಾತೆಗಳ ವಿರುದ್ಧ ಕ್ರಮಕೈಗೊಂಡರೆ, ತಕ್ಕ ಶಾಸ್ತಿಯಾಗುತ್ತದೆ ಎಂದು ಬೆದರಿಕೆಯನ್ನು ನೀಡಿದೆ.

ವಿಡಿಯೋದಲ್ಲಿ ಇಸಿಸ್ ಉಗ್ರರು ನೇರವಾಗಿ ಮಾರ್ಕ್ ಜುಕರ್ ಬರ್ಗ್ ಹಾಗೂ ಜ್ಯಾಕ್ ಡಾರ್ಸೆ ಯವರ ಭಾವಚಿತ್ರಗಳನ್ನು ಬಳಸಿಕೊಂಡಿದ್ದು, ಚಿತ್ರದಲ್ಲಿ ಇಬ್ಬರು ಸಿಇಒಗಳ ಮೇಲೆ ಗುಂಡಿನ ಮಳೆಗೆರೆದಿರುವುದಾಗಿ ಚಿತ್ರಿಸಲಾಗಿದೆ. ಅಲ್ಲದೆ, ನಮ್ಮ ಖಾತೆಗಳನ್ನು ನಿಷ್ಕ್ರಿಗೊಳಿಸಿದರೆ ನೀವು ನಮ್ಮೊಂದಿಗಿರುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.

Write A Comment