ಅಂತರಾಷ್ಟ್ರೀಯ

ಪಾಕ್ ನಲ್ಲಿ ನಡೆಯಬೇಕಿದ್ದ “ಇಂಡಿಯಾ ಶೋ’ ರದ್ದು

Pinterest LinkedIn Tumblr

indiashowಲಾಹೋರ್: ಪಾಕಿಸ್ತಾನದ ಲಾಹೋರ್ ನಲ್ಲಿ ನಡೆಯಬೇಕಿದ್ದ ಮೂರು ದಿನಗಳ ‘ಇಂಡಿಯಾ ಶೋ’ ರದ್ದುಗೊಳಿಸಲಾಗಿದೆ.

ಭದ್ರತಾ ಕೊರತೆಯಿಂದಾಗಿ ಶುಕ್ರವಾದಿಂದ ಆರಂಭವಾಗಬೇಕಿದ್ದ ಮೂರು ದಿನಗಳ ಇಂಡಿಯಾ ಶೋ ರದ್ದುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟ(ಎಫ್ ಐಸಿಸಿಐ), ಭಾರತೀಯ ವ್ಯಾಪಾರ ಅಭಿವೃದ್ಧಿ ಪ್ರಾಧಿಕಾರ(ಟಿಡಿಎಪಿ)ಗಳು ಹಾಗೂ ಪಾಕಿಸ್ತಾನ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟಗಳು ಜೊತೆಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದವು.

ಈ ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ಭಾರತೀಯ ಕಂಪನಿಗಳು ಭಾಗವಹಿಸಬೇಕಿದ್ದು. ಎಫ್ ಐಸಿಸಿಐನ ಅಧ್ಯಕ್ಷ ಹರ್ಷವರ್ಧನ ನಿಯೋಷಿಯಾ ಅವರನ್ನೊಳಗೊಂಡ 40 ಸದಸ್ಯರ ತಂಡ ಲಾಹೋರ್ ಗೆ ತೆರಳಬೇಕಿತ್ತು.

ಭದ್ರತೆ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದ್ದು, ಕಳೆದ ವರ್ಷ ಇದೇ ರೀತಿ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿತ್ತು.

Write A Comment