ರಾಷ್ಟ್ರೀಯ

ದೆಹಲಿಯಲ್ಲಿನ ಶೇ.50 ಅತ್ಯಾಚಾರಕ್ಕೆ ಜೆಎನ್‌ಯು ವಿದ್ಯಾರ್ಥಿಗಳೇ ಜವಾಬ್ದಾರಿ: ಬಿಜೆಪಿ ಶಾಸಕ

Pinterest LinkedIn Tumblr

BJP-MLAನವದೆಹಲಿ: ಇತ್ತೀಚೆಗಷ್ಟೇ ಕಾಂಡೋಮ್ ಹಾಗೂ ಮಾದಕ ವಸ್ತುಗಳ ಕುರಿತಂತೆ ಹೇಳಿಕೆ ನೀಡಿ ಹಲವು ಟೀಕೆಗಳಿಗೆ ಗುರಿಯಾಗಿದ್ದ ಬಿಜೆಪಿ ಶಾಸಕ ಇದೀಗ ಮತ್ತೊಂದು ಹೇಳಿಕೆಯನ್ನು ನೀಡಿದ್ದು, ರಾಜಧಾನಿ ದೆಹಲಿಯಲ್ಲಿ ನಡೆಯುವ ಶೇ.50 ರಷ್ಟು ಅತ್ಯಾಚಾರಗಳಿಗೆ ಜೆಎನ್‌ಯು ವಿವಿಯ ವಿದ್ಯಾರ್ಥಿಗಳೇ ಜವಾಬ್ದಾರಿಯುತರಾಗಿದ್ದಾರೆಂದು ಹೇಳಿದ್ದಾರೆ.

ಜೆಎನ್ ಯು ವಿವಾದ ಕುರಿತಂತೆ ನಿನ್ನೆ ಹೇಳಿಕೆ ನೀಡಿರುವ ಬಿಜೆಪಿ ಶಾಸಕ ಜ್ಞಾನ್ ದೇವ್ ಅಹುಜಾ ಅವರು, ದೆಹಲಿಯಲ್ಲಿ ಆಗುತ್ತಿರುವ ಶೇ.50 ರಷ್ಟು ಭಾಗದ ಅತ್ಯಾಚಾರಗಳಿಗೆ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೇ ಜವಾಬ್ದಾರಿಯುತರಾಗಿದ್ದೇರೆಂದು ಹೇಳಿದ್ದಾರೆ. ಈ ಹಿಂದಷ್ಟೇ ವಿವಿ ವಿದ್ಯಾರ್ಥಿಗಳ ಕುರಿತಂತೆ ಹೇಳಿಕೆ ನೀಡಿದ್ದ ಶಾಸಕ ಇದೀಗ ಮತ್ತೆ ವಿದ್ಯಾರ್ಥಿಗಳ ಮೇಲೆ ಆರೋಪಗಲನ್ನು ಮಾಡುತ್ತಿರುವುದು ವಿದ್ಯಾರ್ಥಿಗಳ ಕಣ್ಣು ಮತ್ತಷ್ಟು ಕೆಂಪಗಾಗುವಂತೆ ಮಾಡಿದೆ.

ಕೆಲವು ದಿನಗಳಿ ಹಿಂದಷ್ಟೇ ಜೆಎನ್ ಯು ವಿವಾದ ಕುರಿತಂತೆ ಹೇಳಿಕೆ ನೀಡಿದ್ದ ಅಹುಜಾ ಅವರು, ಜೆಎನ್ ಯು ವಿವಿಯಲ್ಲಿ ಪ್ರತಿದಿನ 2 ಸಾವಿರ ಮದ್ಯದ ಬಾಟಲಿಗಳು, 10 ಸಾವಿರ ಉಪಯೋಗಿಸಿದ ಸಿಗರೇಟ್, 4 ಸಾವಿರ ಬೀಡಿಗಳು, 50 ಸಾವಿರ ಮೂಳೆಗಳು, 2 ಸಾವಿರ ಚಿಪ್ಸ್ ಕವರ್ಗಳು, 3 ಸಾವಿರ ಬಳಕೆಯಾದ ಕಾಂಡೋಮ್ ಗಳು ಹಾಗೂ 500 ಗರ್ಭನಿರೋಧಕ ಚುಚ್ಚು ಮದ್ದುಗಳು ಪತ್ತೆಯಾಗುತ್ತವೆ. ಅಲ್ಲದೆ, ರಾತ್ರಿ 8 ರ ನಂತರ ವಿವಿಯಲ್ಲಿ ಯುವತಿಯರು ಅರೆ ನಗ್ನ ನೃತ್ಯಗಳನ್ನು ಮಾಡುತ್ತಿರುತ್ತಾರೆ ಎಂದು ಹೇಳಿದ್ದರು.

Write A Comment