ರಾಷ್ಟ್ರೀಯ

ಸ್ಮೃತಿ ಇರಾನಿ ಕ್ಷಮೆಗೆ ಕಾಂಗ್ರೆಸ್ ಪಟ್ಟು

Pinterest LinkedIn Tumblr

smriti-irani-e1456469043701ದೆಹಲಿ: ಜೆಎನ್ ಯು ವಿವಿ ಹಾಗೂ ರೋಹಿತ್ ವೆಮುಲಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದೂ ಕೂಡ ರಾಜ್ಯಸಭೆಯಲ್ಲಿ ಚರ್ಚೆ ಮುಂದುವರೆದಿದೆ. ಸಚಿವೆ ಸ್ಮೃತಿ ಇರಾನಿ ಕಳೆದೆರಡು ದಿನಗಳ ಹಿಂದೆ ಮಾಡಿದ್ದ ಭರ್ಜರಿ ಭಾಷಣದಲ್ಲಿ ದುರ್ಗಾಮಾತೆಗೆ ಅವಮಾನ ಮಾಡುವಂತಹ ಉಲ್ಲೇಖಗಳಿದ್ದ ಪತ್ರವನ್ನು ಓದಿ ದುರ್ಗಾಮಾತೆಗೆ ಅವಮಾನ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಈ ಹಿನ್ನಲೆಯಲ್ಲಿ ಅವರು ಕ್ಷಮೆ ಕೇಳಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ. ಇದಕ್ಕೆ ತಿರುಗೇಟು ನೀಡಿದ ಸ್ಮೃತಿ ಇರಾನಿ, ನಾನೂ ಕೂಡ ದುರ್ಗಾ ದೇವಿಯನ್ನು ಪೂಜಿಸುತ್ತೇನೆ. ಹೀಗಾಗಿ ದೇವಿಗೆ ಅಪಮಾನ ಮಾಡುವ ಉದ್ದೇಶ ನನ್ನದಲ್ಲ. ಅವಶ್ಯಕತೆಗೆ ತಕ್ಕಂತೆ ಸೂಕ್ತ ದಾಖಲೆಗಳನ್ನು ಓದಿದ್ದೇನೆ. ಇದು ಸರ್ಕಾರದ ದಾಖಲೆಗಳಲ್ಲ. ಜೆಎನ್ ಯು ವಿವಿಯ ದಾಖಲೆ ಪತ್ರವಾಗಿದೆ. ಸತ್ಯ ತಿಳಿಯುವ ಸಲುವಾಗಿ ಪೂರ್ತಿ ಪತ್ರ ಓದಬೇಕಾಯಿತು ಎಂದು ಇರಾನಿ ಸ್ಪಷ್ಟನೆ ನೀಡಿದರು.

Write A Comment