ಅಂತರಾಷ್ಟ್ರೀಯ

ಬ್ರೇಕ್‍ಅಪ್ ಆದ್ಮೇಲೆ ಬೆಕ್ಕನ್ನೇ ಮದುವೆಯಾದಳು

Pinterest LinkedIn Tumblr

Woman-marries-her-two-cats

ಲ್ಯಾನ್ಜರೋಟ್: ಪ್ರೀತಿಸಿದವರ ಜೊತೆ ಬ್ರೇಕ್ ಅಪ್ ಆದ್ರೆ ಬೇರೆ ಯಾರಾದರೂ ಸಂಗಾತಿಗಾಗಿ ಕಾಯೋದು ಅಥವಾ ಮನೆಯವರು ನೋಡಿದ ಹುಡುಗ/ಹುಡುಗಿಯನ್ನೇ ಮದುವೆಯಾಗೋದು ಕಾಮನ್. ಆದ್ರೆ ವಿದೇಶದಲ್ಲಿ ಒಬ್ಬ ಮಹಿಳೆ ಬ್ರೇಕ್ ಆದ್ಮೇಲೆ ತನ್ನ ಎರಡು ಮುದ್ದಿನ ಬೆಕ್ಕಿನ ಮರಿಗಳನ್ನೇ ಮದುವೆಯಾಗಿದ್ದಾಳೆ.

ಅಲ್ಲ ಸ್ವಾಮಿ ಬೆಕ್ಕನ್ನ ಕಂಡ್ರೆ ಅಪಶಕುನ ಅಂತ ನಮ್ಮೂರಲ್ಲಿ ಬೈತೀವಿ ಆದ್ರೆ ಯಾರಾದ್ರೂ ಬೆಕ್ಕನ್ನೇ ಮದುವೆಯಾಗ್ತಾರಾ ಅಂತೀರಾ? ಹೌದು. ನಂಬಲಸಾಧ್ಯವಾದರೂ ಇದು ನಿಜ. ಅಟ್ಲಾಂಟಿಕ್ ಸಾಗರದ ಲಾನ್ಜರೋಟ್ ದ್ವೀಪದ ನಿವಾಸಿ ಬಾರ್ಬರೆಲ್ಲಾ, ಲುಗೋಸಿ ಮತ್ತು ಸ್ಪೈಡರ್ ಹೆಸರಿನ ತನ್ನ ಎರಡು ಬೆಕ್ಕುಗಳ ಜೊತೆ ವಿವಾಹವಾಗಿದ್ದಾಳೆ. 45 ವರ್ಷದ ಬಾರ್ಬರೆಲ್ಲಾ ತನ್ನ ಗೆಳೆಯನಿಂದ ದೂರವಾದ ಮೇಲೆ ಪ್ರೀತಿಯ ಬೆಕ್ಕಿನ ಮರಿಗಳ ಜೊತೆಯೇ ಸ್ನೇಹ ಬೆಳೆಸಿಕೊಂಡಿದ್ದಾಳೆ.

ನನ್ನ ಗೆಳೆಯ ನನ್ನನ್ನು ಬಿಟ್ಟು ಹೋದರೂ ಲುಗೋಸಿ ಮತ್ತು ಸ್ಪೈಡರ್ ನನ್ನ ಜೊತೆಗಿದ್ದವು. ಬ್ರೇಕ್ ಅಪ್‍ನ ನೋವಿನಿಂದ ಹೊರಬರಲು ಈ ಬೆಕ್ಕುಗಳೇ ನನಗೆ ಸಹಾಯ ಮಾಡಿದವು. ಅನಂತರ ನನಗೆ ಮನುಷ್ಯರಿಗಿಂತಲೂ ಈ ಬೆಕ್ಕಿನ ಮೇಲಿರುವ ಪ್ರೀತಿಯೇ ತುಂಬಾ ಆಳವಾಗಿದೆ ಎಂದು ತಿಳಿಯಿತು ಎನ್ನುತ್ತಾಳೆ ಬಾರ್ಬರೆಲ್ಲಾ.

ಹೀಗಾಗಿ ತನ್ನ ಪ್ರೀತಿಯನ್ನು ಮದುವೆಯವರೆಗೂ ಕೊಂಡೊಯ್ದ ಈಕೆ ಮ್ಯಾರಿ ಯುವರ್ ಪೆಟ್ ಡಾಟ್ ಕಾಂ ಎಂಬ ವೆಬ್‍ಸೈಟ್‍ನಲ್ಲಿ 1500 ರೂ ಶುಲ್ಕ ಕಟ್ಟುವ ಮೂಲಕ ಅಧಿಕೃತವಾಗಿ ಎರಡೂ ಬೆಕ್ಕಿನ ಜೊತೆ ಆನ್‍ಲೈನ್ ಮದುವೆಯಾಗಿದ್ದಾಳೆ. ಅಲ್ಲದೆ ಬೆಕ್ಕುಗಳ ಜೊತೆಗಿನ ತನ್ನ ಮೂರನೇ ವಿವಾಹ ವಾರ್ಷಿಕೋತ್ಸವಕ್ಕೆ ಅವುಗಳ ಹೆಸರಿನ ಮೊದಲನೇ ಅಕ್ಷರದ ಟ್ಯಾಟೂ ಕೂಡ ಹಾಕಿಸಿಕೊಂಡಿದ್ದಾಳೆ.

Write A Comment