ಚಿಗಾಕೋ: ಅಮೆರಿಕದ ಮಿಚಿಗನ್ ನಲ್ಲಿ ಕಳೆದ ರಾತ್ರಿ ನಡೆದ ಸರಣಿ ಗುಂಡಿನ ದಾಳಿಯಲ್ಲಿ ಕನಿಷ್ಠ ಆರು ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ.
ಚಿಕಾಗೋವಿನ ಕಲಮಝೂ ಕೌಂಟಿಯ ಸುತ್ತಮುತ್ತ ನಡೆದ ಗುಂಡಿನ ದಾಳಿಯಲ್ಲಿ ಆರು ಮಂದಿ ಸಾವನ್ನಪ್ಪಿ ಇತರ ಮೂವರು ಗಾಯಗೊಂಡಿದ್ದಾರೆ. ಇದೊಂದು ತೀರಾ ದುರ್ಘಟನೆಯ ಸಂಗತಿ ಎಂದು ಶಾಂತಿಪಾಲನಾ ಕಚೇರಿಯ ಅಧಿಕಾರಿ ಪೌಲ್ ಮತ್ಯಾಸ್ ತಿಳಿಸಿರುವುದಾಗಿ ಎನ್ ಬಿಸಿ ನ್ಯೂಸ್ ವರದಿ ಮಾಡಿದೆ.
ಟೆಕ್ಸಾಸ್ ಪಟ್ಟಣ ನಿವೇಶನದ ಕ್ರಾಕರ್ ಬ್ಯಾರಲ್ ರೆಸ್ಟೋರೆಂಟ್ ನಲ್ಲಿ ನಾಲ್ವರು ಗುಂಡಿನ ದಾಳಿಗೆ ಆಹುತಿಯಾಗಿದ್ದು, ಮತ್ತಿಬ್ಬರು ಕಲಮಝೂ ಸೀಲ್ಯೆ ಕಿಯಾದಲ್ಲಿ ಸಾವನ್ನಪ್ಪಿದ್ದಾರೆ.
ಸುಮಾರು 50 ವರ್ಷ ವಯಸ್ಸಿನ ಪುರುಷನೊಬ್ಬ ಎಸ್ ಯುವಿ ಕಾರಿನಲ್ಲಿ ಬಂದು ಮೂರು ಬಾರಿ ಗುಂಡು ಹಾರಿಸಿ ಕೊಂದಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ದಾಳಿಗೆ ಕಾರಣ ತಿಳಿದುಬಂದಿಲ್ಲ.
ಸಾವಿಗೀಡಾದವರ ಗುರುತುಗಳನ್ನು ಪೊಲೀಸರು ಬಿಡುಗಡೆ ಮಾಡಿಲ್ಲ. ಆರು ಮಂದಿಯಲ್ಲಿ ಓರ್ವ 8 ವರ್ಷದ ಬಾಲಕನು ಸೇರಿದ್ದಾನೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.