ಅಂತರಾಷ್ಟ್ರೀಯ

ವಾಷಿಂಗ್ಟನ್ ಪರಮಾಣು ಶೃಂಗದಲ್ಲಿ ಮೋದಿ ಹಾಗೂ ಷರೀಫ್ ಭೇಟಿ

Pinterest LinkedIn Tumblr

modi-sharif-Webಇಸ್ಲಾಮಾಬಾದ್: ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಮುಂದಿನ ತಿಂಗಳು ವಾಷಿಂಗ್ಟನ್​ನಲ್ಲಿ ನಡೆಯಲಿರುವ ಪರಮಾಣು ಶೃಂಗದಲ್ಲಿ ಭೇಟಿಯಾಗಲಿದ್ದಾರೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಇಬ್ಬರೂ ನಾಯಕರಿಗೆ ಆಹ್ವಾನ ನೀಡಿದ್ದಾಗಿ ವರದಿಯಾಗಿದೆ.

ಬರಾಕ್ ಒಬಾಮ ಅವರ ಆಹ್ವಾನಕ್ಕೆ ನರೇಂದ್ರ ಮೋದಿ ಹಾಗೂ ನವಾಜ್ ಷರೀಫ್ ಒಪ್ಪಿಗೆ ನೀಡಿದ್ದಾರೆ ಎಂದು ಹೇಳಲಾಗಿದೆ. ಒಬಾಮ ಅವರೇ ಈ ಶೃಂಗ ಆಯೋಜಿಸುತ್ತಿದ್ದು, ಇದು ಮಾರ್ಚ್ 31 ಮತ್ತು ಏಪ್ರಿಲ್ 1ರಂದು ನಡೆಯಲಿದೆ. ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯ ವೃದ್ಧಿಗೆ ಈ ಭೇಟಿ ಪರಿಣಾಮಕಾರಿ ಎಂದೇ ಹೇಳಲಾಗುತ್ತಿದೆ.

2010ರಿಂದ ಒಬಾಮ ಅವರೇ ಆಯೋಜಿಸುತ್ತ ಬಂದಿರುವ ಪರಮಾಣು ಶೃಂಗದಲ್ಲಿ ಭಾರತ ಮತ್ತು ಪಾಕಿಸ್ತಾನದ ಪ್ರಧಾನಿಗಳು ಪಾಲ್ಗೊಂಡಲ್ಲಿ ಇದು ಇತಿಹಾಸದ ಪುಟ ಸೇರಲಿದೆ. ಕಾರಣ ಉಭಯ ರಾಷ್ಟ್ರಗಳ ಪ್ರಧಾನಿಗಳು ಈ ಶೃಂಗದಲ್ಲಿ ಪಾಲ್ಗೊಳ್ಳುತ್ತಿರುವುದು ಇದೇ ಮೊದಲ ಬಾರಿ ಎನಿಸಿಕೊಳ್ಳಲಿದೆ.

Write A Comment