ಅಂತರಾಷ್ಟ್ರೀಯ

ಉ.ಕೊರಿಯಾ ಮೇಲೆ ಹೊಸ ದಿಗ್ಬಂಧನಕ್ಕೆ ಒಬಾಮ ಸಹಿ

Pinterest LinkedIn Tumblr

Obama-oneವಾಷಿಂಗ್ಟನ್‌ : ಉತ್ತರ ಕೊರಿಯಾ ವಿರುದ್ಧ ಹೊಸ ದಿಗ್ಬಂಧನ ವಿಧಿಸುವ ಕಡತಕ್ಕೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಅಂಕಿತ ಹಾಕಿದ್ದಾರೆ.

ಯುದ್ಧದಾಹಿ ರಾಷ್ಟ್ರ ಉತ್ತರ ಕೊರಿಯಾ ಇತ್ತೀಚೆಗೆ ಜಲಜನಕ ಬಾಂಬ್ ಪರೀಕ್ಷೆ ಹಾಗೂ ರಾಕೇಟ್ ಉಡಾವಣೆಯ ನಡೆಸಿತ್ತು. ಈ ಪ್ರಚೋದನಾತ್ಮಕ ನಡೆಗಾಗಿ ಅಮೆರಿಕವು ಈ ಕ್ರಮ ಕೈಗೊಂಡಿದೆ.

ಅಮೆರಿಕದ ಸಂಸತ್ತು ಒಪ್ಪಿಗೆ ನೀಡಿರುವ ದಿಗ್ಬಂಧನ ಹೇರುವ ಕಡತಕ್ಕೆ ಒಬಾಮ ಅವರು ಗುರುವಾರ ಸಹಿ ಹಾಕಿದ್ದಾರೆ. ಗೊತ್ತಿದ್ದೂ ಮಾನವ ಹಕ್ಕುಗಳ ದುರುಪಯೋಗ ಅಥವಾ ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದ ಯಾವುದೇ ಸರಕು ಅಥವಾ ತಂತ್ರಜ್ಞಾನವನ್ನು ಯಾರೂ ಆಮದು ಮಾಡಿಕೊಳ್ಳದಂತೆ ದಿಗ್ಬಂಧನವನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ ಎಂದು ಶ್ವೇತ ಭವನ ತಿಳಿಸಿದೆ.

‘ಉತ್ತರ ಕೊರಿಯಾದ ನಡವಳಿಕೆಗಳು ಹಾಗೂ ಅವರ ಇತ್ತೀಚಿನ ಪ್ರಚೋದನಾತ್ಮಕ ಕೃತ್ಯಗಳಿಂದ ಅಮೆರಿಕ ಆತಂಕಕ್ಕೆ ಒಳಗಾಗಿದೆ’ ಎಂದು ಶ್ವೇತಭವನದ ವಕ್ತಾರ ಜೋಷ್ ಅರ್ನೆಷ್ಟ್ ಅವರು ಒಬಾಮ ಅವರು ಕಡತಕ್ಕೆ ಸಹಿ ಹಾಕುವ ಮುನ್ನ ಹೇಳಿದ್ದರು.

Write A Comment