ಅಂತರಾಷ್ಟ್ರೀಯ

ಅಂಕಾರ ಕಾರುಬಾಂಬ್ ದಾಳಿ, 28 ಸಾವು, 61 ಜನರಿಗೆ ಗಾಯ

Pinterest LinkedIn Tumblr

ankara-finalಅಂಕಾರ (ಟರ್ಕಿ): ಟರ್ಕಿಯ ರಾಜಧಾನಿ ಅಂಕಾರದಲ್ಲಿ ಬುಧವಾರ ಮಧ್ಯರಾತ್ರಿ ಸಂಭವಿಸಿದ ಕಾರುಬಾಂಬ್ ಸ್ಪೋಟದಲ್ಲಿ ಕನಿಷ್ಠ 28 ಮಂದಿ ಸಾವನ್ನಪ್ಪಿ, 61 ಮಂದಿ ಗಾಯಗೊಂಡಿದ್ದಾರೆ. ರಾಜಧಾನಿಯ ಹೃದಯಭಾಗದಲ್ಲಿ ಇರುವ ಟರ್ಕಿ ಸೇನೆಯನ್ನು ಗುರಿಯಾಗಿಟ್ಟುಕೊಂಡು ಈ ದಾಳಿ ನಡೆದಿದೆ ಎಂದು ವರದಿಗಳು ತಿಳಿಸಿವೆ.

ಸೇನಾ ವಾಹನಗಳ ಮೇಲೆ ಕಳೆದ ರಾತ್ರಿ ಬಾಂಬ್ ದಾಳಿ ನಡೆದಿದೆ ಎಂದು ಸಾವಿನ ಸಂಖ್ಯೆಯನ್ನು ದೃಢಪಡಿಸುತ್ತಾ ಉಪ ಪ್ರಧಾನಿ ನೂಮಾನ್ ಕರ್ತಲ್​ವುಸ್ ಹೇಳಿದ್ದಾರೆ. ದಾಳಿ ಎಸಗಿದವರು ಯಾರು ಎಂಬುದು ಸ್ಪಷ್ಟವಾಗಿಲ್ಲ. ಜೆಹಾದಿಗಳು ಮತ್ತು ಕುರ್ದಿಶ್ ಬಂಡುಕೋರರಿಂದ ಟರ್ಕಿಯಲ್ಲಿ ದಾಳಿಗಳು ನಡೆಯುತ್ತಿವೆ ಎಂದು ಹೇಳಿರುವ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡಗಾನ್ ಅವರು ದಾಳಿಕೋರರ ವಿರುದ್ಧ ಸೇಡು ತೀರಿಸದೆ ಬಿಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ.

ಯೋಧರನ್ನು ಒಯ್ಯುತ್ತಿದ್ದ ಸೇನಾ ಬಸ್ಸುಗಳು ಕೇಂದ್ರ ಅಂಕಾರದ ಟ್ರಾಫಿಕ್ ಸಿಗ್ನಲ್​ನಲ್ಲಿ ನಿಂತಿದ್ದಾಗ ಕಾರುಬಾಂಬ್ ಸ್ಪೋಟಿಸಿ, ಇಡೀ ಪ್ರದೇಶದಲ್ಲಿ ಭೀತಿ ಮತ್ತು ಅಯೋಮಯ ಸ್ಥಿತಿ ನಿರ್ಮಾಣಗೊಂಡಿತ್ತು. ಇಡೀ ಪ್ರದೇಶ ಹೊಗೆಯಿಂದ ತುಂಬಿದ್ದ ದೃಶ್ಯಗಳನ್ನು ಜಾಲತಾಣಗಳಲ್ಲಿ ಪ್ರಸಾರಗೊಂಡ ವಿಡಿಯೋಗಳು ತೋರಿಸಿದ್ದವು.

Write A Comment